ಬೆಳೆ ವಿಮೆ ಪರಿಹಾರ ತಾರತಮ್ಯ ನಿವಾರಣೆಗೆ ಒತ್ತಾಯಿಸಿ ಪ್ರತಿಭಟನೆ

CTD 0009
Published on

ಚಿತ್ರದುರ್ಗ: ಬೆಳೆ ವಿಮೆ ಪರಿಹಾರ ವಿತರಣೆಯಲ್ಲಾಗಿರುವ ತಾರತಮ್ಯ ನಿವಾರಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾ ಜ್ಯರೈತ ಸಂಘದ ನೇತೃತ್ವದಲ್ಲಿ ರೈತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. 2023 ಮತ್ತು 2024 ರ ಬೆಳೆ ವಿ ಮೆ ಪರಿಹಾರ ವಿತರಣೆ ಆಗಿರುವ ತಾರತಮ್ಯ ಸರಿಪಡಿಸಿ ನೊಂದ ರೈತರಿಗೆ ನ್ಯಾಯ ಒದಗಿಸ ಬೇಕು. ವಿಮಾ ಕಂತು ಕಟ್ಟದ ರೈತರಿಗೂ ಪರಿ ಹಾರ ಕೊಡಬೇಕು.
ಬ್ಯಾಂಕ್‌ಗಳು ವಿಮಾ ಪರಿಹಾರ, ಬೆಳೆ ನಷ್ಟ ಪರಿಹಾರ,ವಿಧವಾ,ಅಂಗವಿಕಲ,ವೃದ್ಯಾಪ್ಯ ವೇತನ,ಪಿಎಂ ಕಿಸಾನ್ ಸಮಾನ್ ಇತ್ಯಾದಿ ಮೊ ತ್ತಗಳನ್ನು ಸಾಲಕ್ಕೆ ಜಮಾ ಪಡೆಯಬಾರದು. ಹವಾಮಾನ ಆಧಾರಿತ 2022-23ನೇ ಸಾಲಿನ ಬೆಳೆ ವಿಮೆ ಪರಿಹಾರವನ್ನು ನಷ್ಟ ಅನುಭವಿ ಸಿ ದ ಎಲ್ಲ ತೋಟಗಾರಿಕೆ ಬೆಳೆಗಾರರಿಗೆ ವಿತರಿಸಬೇಕು. ವಿದ್ಯುತ್ ಇಲಾಖೆಯಲ್ಲಿ ಈವರೆಗೆ ಅಕ್ರಮ ಸಕ್ರಮದಡಿ ನೋಂದಣಿ ಮಾಡಿಕೊಂ ಡಿರುವ ರೈತರಿಗೆ ವಿದ್ಯುತ್ ಸಂಪರ್ಕ ಸೌಲಭ್ಯವನ್ನು ಒದಗಿಸಬೇಕು. 2022-2023 ಸಾಲಿನಲ್ಲಿ ಬೆಳೆ ಪರಿಹಾರದಲ್ಲಿ ಆಗಿರುವ ಅವ್ಯವಹಾ ರದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಹಾಗೂ ರೈತರಿಗೆ ಪರಿಹಾರ ವಿತರಿಸಬೇಕು.
ಭದ್ರಾಮೇಲ್ದಂಡೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ಎಡಿಸಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮನ ವಿ ಸಲ್ಲಿಸಿದರು. ರಾಜ್ಯರೈತ ಸಂಘದ ಕಾರ‌್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ, ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್,ನಿಜಲಿಂಗಪ್ಪ,ಸದಾಶಿವ,ಬೋ ರೇಶ್,ತಿಪ್ಪೇಸ್ವಾಮಿ,ಮಂಜುನಾಥ್,ಬಸವರಾಜಪ್ಪ,ಸತೀಶ್,ರಂಗಸ್ವಾಮಿ,ಬಸವರಾಜ್,ನಿರಂಜನಮೂರ್ತಿ,ವರದಪ್ಪ,ನಾಗರಾಜಪ್ಪ,ನಾಗ ರಾಜರೆಡ್ಡಿ,ಜಯಪ್ಪ,ಶಂಕರಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net