ಬೆಳೆ ವಿಮಾ ಯೋಜನೆಗೆ ಅರ್ಜಿ

images (1)
Published on

ಮೈಸೂರು: 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅನುಷ್ಠಾನಗೊಳಿಸಲು ಮೈಸೂರು, ಎಚ್.ಡಿ.ಕೋಟೆ, ಹುಣಸೂರು, ಕೆ.ಆರ್.ನಗರ, ನಂಜನಗೂಡು, ಪಿರಿಯಾಪಟ್ಟಣ, ತಿ.ನರಸೀಪುರ ತಾಲೂಕುಗಳ 136 ಗ್ರಾಮ ಪಂಚಾಯಿತಿಗಳಲ್ಲಿ ಮಾವು ಬೆಳೆಗೆ 80 ಸಾವಿರ ರೂ.ಗಳಂತೆ ಬೆಳೆ ವಿಮಾ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.


ರೈತರು ಹೆಕ್ಟೇರ್‌ಗೆ ಶೇ.5ರಂತೆ 4 ಸಾವಿರ ರೂ. ವಿಮಾ ಕಂತನ್ನು ಪಾವತಿಸಬೇಕಾಗಿದ್ದು, ಪಾವತಿಗೆ ಜು.31 ಕೊನೆಯ ದಿನಾಂಕವಾಗಿದೆ. ವಿಮೆ ಪಾವತಿಸಲು ಹತ್ತಿರದ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ ಅರ್ಜಿಯೊಂದಿಗೆ ಪಹಣಿ ಬ್ಯಾಂಕ್ ಪಾಸ್ ಬುಕ್, ನಕಲು ಸ್ವಯಂ ಘೋಷಿತ ಬೆಳೆ ವಿವರ ಸಲ್ಲಿಸಬೇಕು. ರೈತರು ಬೆಳೆವಾರು ವಿಮೆಗಳನ್ನು ಆನ್‌ಲೈನ್ ಮೂಲಕ www.samrakshane.nic.in ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬಹುದು.


ಮೊಹಿತಿಗಾಗಿ ಮೈಸೂರು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು (ಜಿ.ಪಂ) ದೂ 0821-2430450, ಎಚ್.ಡಿ. ಕೋಟೆ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು(ಜಿ.ಪಂ) ದೂ. 08228-255261, ಹುಣಸೂರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿ.ಪಂ) ದೂ. 08222-252447, ಕೆ.ಆರ್. ನಗರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿ.ಪಂ) ದೂ. 08223-262791, ನಂಜನಗೂಡು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿ.ಪಂ) ದೂ. 08221-226201, ಪಿರಿಯಾಪಟ್ಟಣ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿ.ಪಂ) ದೂ 008223-273535 ಮತ್ತು ತಿ. ನರಸೀಪುರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿ.ಪಂ) ದೂ. 08227-260086 ಸಂಪರ್ಕಿಸಬಹುದು ಎಂದು ಜಿಲ್ಲಾ ಪಂಚಾಯತ್ ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net