

ತುಮಕೂರು ; ರಾಜ್ಯದೆಲ್ಲೆಡೆ ಹೆಚ್ಚು ಮಳೆಯಿಂದ ಬೆಳೆ, ಮನೆ ಹಾನಿ ಉಂಟಾಗಿದೆ, ರೈತರಿಗೆ ಸೂಕ್ತ ಪರಿಹಾರ ಒದಗಿಸುವ ಸಂಬಂಧ ಮುಖ್ಯಮಂತ್ರಿ ತೀರ್ವಾನ ಕೈಗೊಂಡಿದ್ದು, ಶ್ರೀದಲ್ಲೇ ರೈತರು ಮತ್ತು ಫಲಾನುಭವಿಗಳಿಗೆ ನೆರವು ಸಿಗಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ನಗರದ ಅರಳೇಪೇಟೆ ಬಸವೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ಧಾರ ಹಾಗೂ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಮತ್ತು ಕುಂಭಾಭಿಷೇಕ ಮಹೋತ್ಸವ ಪ್ರಯುಕ್ತ ಭಾನುವಾರ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಶ್ರೀ ಭ್ರಮರಾಂಭ ಅಮ್ಮನವರ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ದೇವಾಲಯದ ಪ್ರಾರಂಭೋತ್ಸವ ನಾಮಫಲಕ ಅನಾವರಣಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ದೇಶದಲ್ಲಿ ಕರೊನಾ 3ನೇ ಅಲೆ ಆತಂಕ ಎದುರಾಗಿದ್ದು, ಪ್ರಧಾನ ಮಂತ್ರಿಗಳು ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕೈಗೊಳ್ಳಲು ವಾರ್ಗಸೂಚಿ ಬಿಡುಗಡೆ ವಾಡಿದ್ದಾರೆ, ರಾಜ್ಯದಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಕಾನೂನು ಚೌಕಟ್ಟಿನಲ್ಲಿ ಲೋಕಾಯುಕ್ತ ಹಾಗೂ ಎಸಿಬಿ ಎರಡೂ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಭ್ರಷ್ಟರ ಪತ್ತೆಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಕೆಲಸ ನಡೆಯುತ್ತಿದೆ ಎಂದರು.
ನನ್ನ 50 ವರ್ಷದ ರಾಜಕಾರಣದ ಇತಿಹಾಸದಲ್ಲಿ ಸಾಕಷ್ಟು ಗುಡಿ ಗೋಪುರ, ದೇವಾಲಯ ನೋಡಿದ್ದೇನೆ. ಅರಳೇಪೇಟೆಯಲ್ಲಿ ಸವಾಜದ ಬಂಧುಗಳು ನಿರ್ಮಿಸಿರುವ ಈ ದೇವಾಲಯ ಪುರಾತನ ಇತಿಹಾಸ ಹೊಂದಿದೆ. ಇದು ಎಲ್ಲ ವರ್ಗದ ದೇವಾಲಯ ಎಂದ ಅವರು, ಜಾತ್ಯತೀತವಾದ ನಂಬಿಕೆ, ಧಾರ್ಮಿಕ ಭಾವನೆ ಉಳಿಸಿಕೊಂಡು ಬರುವ ಪವಿತ್ರವಾದ ಸ್ಥಳ ಇದಾಗಿದೆ ಎಂದರು.
ಎಡೆಯೂರಿನ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ನೊಣವಿನಕೆರೆ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ಶ್ರೀ ರೇವಣ್ಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ವಾಗಡಿ ಜಂಗಮ ಮಠದ ಶ್ರೀ ಇಮ್ಮಡಿ ಬಸವರಾಜ ಸ್ವಾಮೀಜಿ, ಉಪಾಧ್ಯಕ್ಷ ಎಸ್.ಜಿ.ಚಂದ್ರಮೌಳಿ, ದೇವಸ್ಥಾನ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ದೇವಸ್ಥಾನ ಸಮಿತಿಯ ಗೌರವ ಕಾರ್ಯದರ್ಶಿ ಅತ್ತಿ ರೇಣುಕಾನಂದ, ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ಮೋಹನ್‌ಪಟೇಲ್, ಶಿವಕುವಾರ್ ಇದ್ದರು.
ತುಮಕೂರು ಜಿಲ್ಲೆ ಪಾವಿತ್ರ್ಯತೆ, ಸಂಸ್ಕಾರಕ್ಕೆ ದೇಶದ ಸನ್ನಡತೆಗೆ ಹೆಸರು ಗಳಿಸಿರುವ ಜಿಲ್ಲೆ. ಸಿದ್ಧಗಂಗಾ ಮಠಾಧ್ಯಕ್ಷ ಡಾ.ಶಿವಕುವಾರ ಸ್ವಾಮೀಜಿ ಕರ್ಮಭೂಮಿಯಾಗಿರುವುದರಿಂದ ಪಾವಿತ್ರ್ಯತೆಯ ಜತೆಯಲ್ಲಿ ಧಾರ್ಮಿಕ ಕಾರ್ಯಗಳಲ್ಲೂ ಮುಂಚೂಣಿಯಲ್ಲಿದೆ. ವಿ.ಸೋಮಣ್ಣ, ವಸತಿ ಸಚಿವ