

ಚಿತ್ರದುರ್ಗ:ಎನ್‌ಡಿಆರ್‌ಎಫ್ ನಿಯಮಗಳ ಪ್ರಕಾರ ನೀರಾವರಿ,ತೋಟಗಾರಿಕೆ ಬೆಳೆಗಳಿಗೆ ಮೂರು ಹಂತಗಳಲ್ಲಿ ಬರ ಪರಿಹಾರ ವಿತರಿಸದಿದ್ದರೆ ಹೋರಾಟ ಅನಿವಾರ‌್ಯವೆಂದು ಅಖಂಡ ಕರ್ನಾಟಕ ರೈತ ಸಂಘ ಅಧ್ಯಕ್ಷ ಸೋಮಗುದ್ದು ರಂಗಸ್ವಾಮಿ ರಾಜ್ಯಸರ್ಕಾರವನ್ನು ಎಚ್ಚರಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ಈವರೆಗೂ ಪರಿಹಾರ ಮೊತ್ತ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಆಗಿಲ್ಲ. ಇದೆ ಪರಿಸ್ಥಿತಿ ಮುಂದುವರಿದರೆ ಹೋರಾಟ ಅನಿವಾರ‌್ಯ.
ಕಳೆದ ವರ್ಷ ರೈತರು ಭೀಕರ ಬರಗಾಲಕ್ಕೆ ತುತ್ತಾಗಿದ್ದಾರೆ. ಸರ್ಕಾರ ಇತ್ತ ಗಮನ ಹರಿಸಿ ಉಚಿತವಾಗಿ ಬೀಜ,ಗೊಬ್ಬರ ಮತ್ತು ಕೃಷಿ ಪರಿಕರ ಕೊಡಬೇಕು. ಸಕಾಲಕ್ಕೆ ಸಾಲ ನೀಡದೆ ಬ್ಯಾಂಕ್‌ನವರು ಸತಾಯಿಸುತ್ತಿದ್ದು,ಶೋಷಣೆ ನಿಲ್ಲಬೇಕು. ಎಲ್ಲ ಬ್ಯಾಂಕ್‌ನ ಹಾಗೂ ಸಂಘ ಸಂಸ್ಥೆಗಳ ಸಾಲ ಮನ್ನ ಮಾಡಬೇಕೆಂದು ಒತ್ತಾಯಿಸಿದರು.
ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ತುಂಬಿಸಬೇಕು. ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಹೆಚ್ಚಿಸುವುದಕ್ಕೆ ಮುಂದಾಗಿರುವ ಸರ್ಕಾರದ ನಿರ್ಧಾರ ಪ್ರಯಾಣಿಕರಿಗೆ ಮತ್ತಷ್ಟು ಹೊರೆಯಾಗಲಿದೆ. ಜಮೀನುಗಳಿಗೆ ಓಡಾಡಲು ದಾರಿ ಸಮಸ್ಯೆಯಿದೆ. ಸರ್ಕಾರ ಮಧ್ಯ ಪ್ರವೇಶಿಸಿ ಸ ಮಸ್ಯ್ನೆ ಇತ್ಯರ್ಥಪಡಿಸಿ ರೈತರ ನೆರವಿಗೆ ಮುಂದಾಗಬೇಕೆಂದು ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ಎಲ್.ಬಸವರಾಜಪ್ಪ ಅಳಗವಾಡಿ,ಗೌರವಾಧ್ಯಕ್ಷ ಜಿ.ಮೇಘರಾಜ್‌ಹಳಿಯೂರು,ಕುರುಬರಹಳ್ಳಿ ಶಿವಣ್ಣ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿದ್ದಪ್ಪ ಹಳಿಯೂರು,ಸಂಘಟನಾ ಕಾರ್ಯದರ್ಶಿ ಜಿ.ಪರಮೇಶ್ವರಪ್ಪ,ಖಾದರ್‌ಭಾಷ, ನವೀನ್‌ಕುಮಾರ್, ಎ ಚ್.ನಿರಂಜನಮೂರ್ತಿ,ಬೊಮ್ಮಯ್ಯ,ಎ.ಎಸ್.ಗುರುಸಿದ್ದಪ್ಪ,ಏಕಾಂತಪ್ಪ, ಚಳ್ಳಕೆರೆ ತಾಲೂಕು ರೈತ ಸಂಘದ ಅಧ್ಯಕ್ಷ ಚಿಕ್ಕಣ್ಣ ಮತ್ತಿತರರು ಇದ್ದರು.