ಬೆಳೆ ನಷ್ಟ ಪರಿಹಾರಕ್ಕೆ ರೈತರ ಒತ್ತಾಯ

CTD 26 AKANADA-002
Published on

ಚಿತ್ರದುರ್ಗ: ಕಳೆದ ತಿಂಗಳು ಚಳ್ಳಕೆರೆ ತಾಲೂಕಿನಲ್ಲಿ ಸುರಿದ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಯಿಂದಾದ ಬೆಳೆ ನಷ್ಟಕ್ಕೆ ತಕ್ಷಣ ಪರಿಹಾರ ಬಿಡುಗಡೆ ಮಾಡುವಂತೆ ರೈತರು ಒತ್ತಾಯಿಸಿದ್ದಾರೆ. ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಶುಕ್ರವಾರ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ ಬಳಿಕ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನಿಯಾಮಾನುಸಾರ ಪರಿಹಾರ ವಿತರಿಸಲು ಸಮಯಬೇಕಾಗುತ್ತದೆ. ಇದರಿಂದ ನೊಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು. ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಪ್ರಧಾನ ಕಾರ‌್ಯದರ್ಶಿ ಸೋಮಗುದ್ದು ರಂಗಸ್ವಾಮಿ ಮಾತನಾಡಿ,ಆಲಿಕಲ್ಲು ಮಳೆ ಹಾಗೂ ಬಿರುಗಾಳಿಯಿಂದ ತಾಲೂಕಿನ 50 ಹಳ್ಳಿಗಳಲ್ಲಿ ಬಾಳೆ, ಮೆಕ್ಕೆಜೋಳ,ರಾಗಿ ಇತರೆ ಬೆಳೆ ನಷ್ಟವಾಗಿದೆ.

ಬೆಳೆ ವಿಮೆ,ನಷ್ಟ ಪರಿಹಾರ ದುರ್ಬಳಕೆಗೆ ಸಂಬಂಧಿಸಿದಂತೆ ಹಿಂದಿನ ತಹಸೀಲ್ದಾರ್ ಎನ್.ರಘುಮೂರ್ತಿ ಮತ್ತಿತರರ ವಿರುದ್ಧ ತೆಗೆ ದುಕೊಂಡಿರುವ ಕ್ರಮ ಸ್ವಾಗತಾರ್ಹ. ಆದರೆ ದುರ್ಬಳಕೆ ಹಣ ಸಂಪೂರ್ಣವಾಗಿ ಖಜಾನೆಗೆ ಭರ್ತಿಯಾಗಿಲ್ಲ. ಈ ಕುರಿತು ಶಾಸನ ಸಭೆಯಲ್ಲಿ ಜನಪ್ರತಿನಿಧಿಗಳು ದನಿ ಎತ್ತ ಬೇಕಿದೆ ಎಂದರು. ಅರಣ್ಯಇಲಾಖೆ ಈವರೆಗೆ ಒಂದು ಸಸಿಗೆ ನಿಗದಿಪಡಿಸಿದ್ದ 3ರಿಂದ 5 ರೂ.ಗಳನ್ನು 21 ರೂ.ಗೆ ಏರಿಸಿದ್ದು,ದರ ಇಳಿಕೆಗೆ ಒತ್ತಾಯಿಸಿದರು.

ಕುರುಬರಹಳ್ಳಿ ಶಿವಣ್ಣ ಸಭೆಯಲ್ಲಿ ಮಾತನಾಡಿ,ಎಂಟತ್ತು ರೈತರು ತಮ್ಮ ಜಮೀನುಗಳಿಗೆ ಓಡಾಡಲು ಆಗಿರುವ ತೊಂದರೆ ನಿವಾರಿಸ ಬೇಕೆಂದು ಕೋರಿದರು. ಬಸ್ತಿಹಳ್ಳಿನಾರಪ್ಪ,ಎಂ.ಸಿದ್ದಪ್ಪ ಹಳಿಯೂರು ಎಸ್.ಎಂ.ಶಿವಕುಮಾರ್,ವೆಂಕಟರಮಣಪ್ಪ, ಎನ್.ಜಿ.ಷಣ್ಮುಖಪ್ಪ, ಬಸವರಾಜಪ್ಪ,ಚಿಕ್ಕಣ್ಣ,ಎಚ್.ಪ್ರಕಾಶ್, ಹನುಮಂತರಾಯ, ವೆಂಕಟರಾಮಣ್ಣ,ಹೊಸಹಳ್ಳಿ ವೀರಣ್ಣ ಇತರರು ಇದ್ದರು.
ಎಸ್.ಎಂ.ಶಿವಕುಮಾರ್,ವೆಂಕಟರಮಣಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net