

ಚಿತ್ರದುರ್ಗ: ಮಳೆಯಿಂದ ನಷ್ಟವಾದ ಬೆಳೆಗಳಿಗೆ ಎನ್‌ಡಿಆರ್‌ಎಫ್ ನಿಧಿಯಿಂದ ಪರಿಹಾರಕ್ಕೆ ಒತ್ತಾಯಿಸಿ ರೈತರು ಸೋಮವಾರ ಡಿಸಿ ಟಿ. ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರು. ಜಿಲ್ಲೆಯಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದ ಈರುಳ್ಳಿ, ಟೊಮೊಟೊ, ಮೆಣಸಿನಕಾಯಿ, ದಾಳಿಂಬೆ, ಪಪ್ಪಾಯಿ ನಾಶವಾಗಿದೆ.
ತೋಟಗಾರಿಕೆ ಮತ್ತು ಕಂದಾಯ ಇಲಾಖೆಗಳಿಂದ ಜಂಟಿ ಸಮೀಕ್ಷೆ ನಡೆಸಿ ಎನ್‌ಡಿಆರ್‌ಎಫ್ ಫಂಡ್‌ನಿಂದ ಮತ್ತು ಬೆಳೆ ವಿಮೆ ಮಾಡಿಸಿದ ರೈತರಿಗೆ ವಿಮಾ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಹವಾಮಾನ ಆಧಾರಿತ ಬೆಳೆ ವಿಮೆ ರೈತರ ಖಾತೆಗೆ ಜಮಾ ಮಾಡುವಲ್ಲಿ ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ನಿಜಲಿಂಗಪ್ಪ, ಎಸ್.ಆರ್. ತಿಮ್ಮಯ್ಯ, ಕೋಗುಂಡೆ ರವಿ, ಮುದ್ದಾಪುರ ನಾಗಣ್ಣ, ಮಾರುತಿ, ಸೂರಣ್ಣ, ಮೂರ್ತಿ, ಕರಿಬಸಣ್ಣ, ಸಂಜೀವಪ್ಪ ಇದ್ದರು.