

ಚಿತ್ರದುರ್ಗ: ನಿರ್ದಿಷ್ಟ ಸಮಯದಲ್ಲಿ ಬೆಳೆ ಕಟಾವು ಪ್ರಯೋಗ ಮಾಡದೆ ನಿರ್ಲಕ್ಷ್ಯತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗು ವುದೆಂದು ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅವರು ಹೇಳಿದರು.
ಡಿಸಿ ಕಚೇರಿಯಲ್ಲಿ ಬುಧವಾರ ಜಿಲ್ಲಾ ಮಟ್ಟದ ಮೊದಲನೇ ತ್ರೈಮಾಸಿಕ ಕೃಷಿ ಅಂಕಿ ಅಂಶಗಳು ಸಮನ್ವಯ ಸಮಿತಿ ಸಭೆಯಲ್ಲಿ ಮಾ ತನಾಡಿದ ಅವರು,ನಿಗದಿಪಡಿಸಿದ ಅವಧಿಯೊಳಗೆ ಬೆಳೆ ಕಟಾವು ಪ್ರಯೋಗ ಮಾಡದಿದ್ದರೆ ಬೆಳೆ ವಿಮೆ ಪರಿಹಾರದಲ್ಲಿ ರೈತರಿಗೆ ನಷ್ಟ ಉಂ ಟಾಗಲಿದ್ದು, ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಕಂಡುಬಂದರೆ,ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಖಚಿತ ಎಂದರು.
ಹೋಬಳಿ,ತಾಲೂಕು ಮಟ್ಟದ ಬೆಳೆ ವಿಮೆ ನಿಗದಿಗೆ ಈ ಪ್ರಯೋಗವೇ ಆಧಾರ. ಇದರಲ್ಲಿ ಯಾವುದೇ ರೀತಿಯ ತಪ್ಪಾಗ ಬಾರದು. ನಿಯೋಜಿತ ಅಧಿಕಾರಿ ಹಾಗೂ ನೌಕರರು ಖುದ್ದು ಜಮೀನಿಗೆ ತೆರಳಿ ಕ್ರಮ ವಹಿಸಬೇಕು. ಪ್ರಯೋಗ ಮಾಡದೇ ಇದ್ದಲ್ಲಿ ಅಥವಾ ನಿರ್ಲ ಕ್ಷ್ಯದಿಂದ ಮಾಹಿತಿ ತಪ್ಪಾದರೆ ಪ್ರಯೋಗ ಮಾಡಿದ ಅಧಿಕಾರಿಯನ್ನೇ ಹೊಣೆ ಮಾಡಲಾಗುವುದು. ಇದರಿಂದಾಗಿ ರೈತರಿಗೆ ವಿಮಾ ಪರಿ ಹಾರ ದೊರಕದಿದ್ದರೆ ಅಥವಾ ಕಡಿಮೆ ಆದಲ್ಲಿ ಕಟಾವು ಪ್ರಯೋಗ ಕೈಗೊಂಡ ಅಧಿಕಾರಿ ವೇತನದಲ್ಲಿ ಕಡಿತಗೊಳಿಸಿ ಪರಿಹಾರದ ನಷ್ಟವನ್ನು ತುಂಬಿಕೊಡಲಾಗುವುದೆಂದು ಎಚ್ಚರಿಸಿದರು.
ಸಬೂಬು ಸಲ್ಲದು
ಕೃಷಿ,ತೋಟಗಾರಿಕೆ,ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳು ಹಂಚಿಕೆಯಾದ ಬೆಳೆ ಕಟಾವುಗಳನ್ನು ಸರಿಯಾ ದ ಸಮಯಕ್ಕೆ ನಡೆಸಬೇಕು,ಸಬೂಬು ಸಲ್ಲದು. ಬೆಳೆ ಕಟಾವು ಪ್ರಯೋಗ ಕೈಗೊಳ್ಳದ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊ ಳಿಸಿ,ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗುವುದು.
ಬೆಳೆ ಕಟಾವು ಹಾಗೂ ನೋಂದಣಿಯಲ್ಲಿ ಅಕ್ರಮಗಳು ಕಂಡು ಬಂದಿವೆ. ರೈತರ ಫ್ರೂಟ್ಸ್ ಐಡಿ ಆಧರಿಸಿ,ಬೆಂಬಲ ಬೆಲೆಯಡಿ ಬೆಳೆ ಗಳನ್ನು ಖರೀದಿಸಲಾಗುತ್ತದೆ. ಆದ್ದರಿಂದ ಈ ಐಡಿ ತಿದ್ದಬಾರದೆಂದ ಡಿಸಿ,ಬೆಳೆ ಕಟಾವು ಪ್ರಯೋಗ ಪಾರದರ್ಶಕವಾಗಿರಲು ವಿಮಾ ಕಂ ಪನಿ ಅಧಿಕಾರಿಗಳು ಕೂಡ ಅಂಥ ಸಂದರ್ಭದಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ಪ್ರತಿ ತಾಲೂಕಿಗೆ ಮೂರ‌್ನಾಲ್ಕು ಪ್ರತಿನಿಧಿಗಳನ್ನು ನೇಮಿಸಬೇಕು ಎಂದರು
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಹನುಮಾನಾಯ್ಕ,ಕೃಷಿ ಗಣತಿಯಲ್ಲಿ ರಾಜ್ಯದಲ್ಲೇ ಜಿಲ್ಲೆಗೆ 2ನೇ ದೊರ ಕಿದೆ. ಈ ಸಾಲಿಗೆ ಜಿಲ್ಲೆಯಲ್ಲಿ 4202 ಬೆಳೆ ಕಟಾವು ಪ್ರಯೋಗಗಳ ಗುರಿ ಇದೆ. ಮೊಳಕಾಲ್ಮೂರು 466,ಚಳ್ಳಕೆರೆ 926,ಚಿತ್ರದುರ್ಗ 752, ಹೊಳಲ್ಕೆರೆ 550,ಹೊಸದುರ್ಗ 552 ಹಾಗೂ ಹಿರಿಯೂರು 956 ಬೆಳೆ ಕಟಾವು ಪ್ರಯೋಗಳನ್ನು ಕೈಗೊಳ್ಳಬೇಕಿದೆ.
ಈವರೆಗೂ ಜಿಲ್ಲೆಯಲ್ಲಿ ಅಗತ್ಯ ಪ್ರಮಾಣದಷ್ಟು ಬಿತ್ತನೆಯಾಗಿಲ್ಲ. ಕಂದಾಯ ಇಲಾಖೆ 2004,ಕೃಷಿ ಇಲಾಖೆ 544, ತೋಟಗಾರಿಕೆ 542 ಹಾಗೂ ಗಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ಇಲಾಖೆಗೆ 1112 ಪ್ರಯೋಗಗಳನ್ನು ಹಂಚಿಕೆ ಮಾಡಲಾಗಿದೆ. ಶೇ.15 ಪ್ರಯೋಗ ಗಳ ಮೇಲ್ವಿಚಾರಣೆಗಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ತಹಸೀಲ್ದಾರ ನೇತೃತ್ವದಲ್ಲಿ ಪ್ರತಿ ಮಾಹೆ ಬೆಳೆ ಕಟಾವು ಪ್ರಯೋಗ ಸಭೆಗಳನ್ನು ನಡೆಸಬೇಕು. ರಾಜ್ಯಹಾಗೂ ಕೇಂದ್ರ ವಲಯದ ಕಟಾವು ನಡೆಸಲು ಜಿಲ್ಲೆಯಲ್ಲಿ 20 ಗ್ರಾಮಗಳ ಆಯ್ಕೆ ಮಾಡ ಬೇಕಿದ್ದು, ಶೀಘ್ರದಲ್ಲೇ ಈ ಗ್ರಾಮಗಳನ್ನು ಆಯ್ಕೆ ಮಾಡಲಾಗುವುದು.
ತೋಟಗಾರಿಕೆ ಬೆಳೆಗಳ ಕಟಾವು ಮಾಹಿತಿಯನ್ನು ರಾಜ್ಯಕ್ಕೆ ಸಲ್ಲಿಸಲು ಜು.31 ಕಡೆ ದಿನವಾಗಿದ್ದು,25ರೊಳಗಾಗಿ ಕಟಾವು ಪ್ರಯೋಗ ಪೂರ್ಣಗೊಳಿಸ ಬೇಕಿದೆ ಎಂದರು.
ಉಪವಿಭಾಗಾಧಿಕಾರಿ ಎಂ.ಕಾರ್ತಿಕ್,ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ,ಸಹಾಯಕ ಅಂಕಿ ಸಂಖ್ಯೆ ಅಧಿಕಾರಿ ಅಶ್ವತ್ಥಾಮ,ಅಗ್ರಿಕಲ್ಚರ್ ಇನ್‌ಶ್ಯೂರೆನ್ಸ್ ಕಂಪನಿ ಜಿಲ್ಲಾ ಪ್ರತಿನಿಧಿ ಧರ್ಮರಾಜ್ ಮತ್ತಿತರ ಅಧಿಕಾರಿಗಳಿದ್ದರು.