ಬೆಳವಡಿ ಮಲ್ಲಮ್ಮ ಜಯಂತ್ಯುತ್ಸವ

web3
ಬೆಳವಡಿ ಮಲ್ಲಮ್ಮಳ ವೀರಜ್ಯೋತಿಯನ್ನು ಗ್ರಾಮಸ್ಥರು ಸ್ವಾಗತಿಸಿದರು. ಪ್ರಕಾಶ ಹುಂಬಿ, ಈರಣ್ಣ ಕರಿಕಟ್ಟಿ, ವಿಶ್ವನಾಥ ಕರೀಕಟ್ಟಿ ಇತರರಿದ್ದರು.
Published on

ಬೈಲಹೊಂಗಲ: ಐತಿಹಾಸಿಕ ಮಲ್ಲಮ್ಮ ಬೆಳವಡಿ ಗ್ರಾಮದಲ್ಲಿ ವೀರರಾಣಿ ಬೆಳವಡಿ ಮಲ್ಲಮ್ಮಳ 364ನೇ ಜಯಂತಿ ಉತ್ಸವವನ್ನು ಈಚೆಗೆ ಸಂಭ್ರಮದಿಂದ ಆಚರಿಸಲಾಯಿತು.

ಹೂಲಿ ಮಠದಿಂದ ವಿವಿಧ ಗ್ರಾಮಗಳಲ್ಲಿ ಪೂಜೆ, ಮೆರವಣಿಗೆ ಮೂಲಕ ಸಾಗಿ ಬಂದ ಮಲ್ಲಮ್ಮಳ ವೀರ ಜ್ಯೋತಿಗೆ ಬೆಳವಡಿ ಗ್ರಾಮಸ್ಥರು ರಾಣಿ ಮಲ್ಲಮ್ಮ ವತ್ತದಲ್ಲಿ ಭವ್ಯವಾಗಿ ಸ್ವಾಗತ ಕೋರಿದರು. ಗ್ರಾಪಂ ಅಧ್ಯಕ್ಷ ಚಂದ್ರಶೇಖರಯ್ಯ ಕಾರಿಮನಿ ಮಲ್ಲಮ್ಮಳ ಪ್ರತಿಮೆಗೆ ಹೂಮಾಲೆ ಹಾಕಿ ನಾಡ ಧ್ವಜಾರೋಹಣ ನೆರವೇರಿಸಿದರು.

ಸಾಮಾಜಿಕ ಕಾರ್ಯಕರ್ತ ಪ್ರಕಾಶ ಹುಂಬಿ ಮಾತನಾಡಿ, ಬೆಳವಡಿ ಗ್ರಾಮದ ಸಮಗ್ರ ಅಭಿವೃದ್ಧಿ ಮಾಡಬೇಕು. ರಾಣಿ ಮಲ್ಲಮ್ಮಳ ವೃತ್ತದ ಅಭಿವದ್ಧಿ ಮಂದಗತಿಯಲ್ಲಿ ಸಾಗಿದೆ. ಪ್ರತಿಮೆ ಸ್ಥಾಪನೆಗೆ ಕಳಪೆ ಟೈಲ್ಸ್ ಬಳಸಲಾಗಿದೆ. ಬೆಳವಡಿ ಮಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು. ಬೆಳಗಾವಿ ಸುವರ್ಣ ಸೌಧದ ಎದುರು ಬೆಳವಡಿ ಮಲ್ಲಮ್ಮಳ ಪ್ರತಿಮೆ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಜಿಪಂ ಮಾಜಿ ಸದಸ್ಯ ಈರಣ್ಣ ಕರೀಕಟ್ಟಿ, ವಿಶ್ವನಾಥ ಕರೀಕಟ್ಟಿ, ಬಿ.ಜಿ.ದೇಗಾವಿ, ಈರಣ್ಣ ತುರಾಯಿ, ಬಸವರಾಜ ಉಡಿಕೇರಿ, ಮಹಾಂತೇಶ ಕರೀಕಟ್ಟಿ, ಸಲೀಂ ಹುಜರತಿ, ಮಹಾಂತೇಶ ಕೊರವಿನಕೊಪ್ಪ, ಪಿಂಟು ಗುಡ್ಡದಮಠ, ರಮ್ಜಾನ್ ನದ್ಾ, ಪ್ರದೀಪ ಬಿಸರೊಳ್ಳಿ, ವಿಠ್ಠಲ ರೋಡಸಿ, ಕೀರ ವಡ್ಡರ, ಕೀರ ಸಾವಂತ್ರಿ, ವಿ.ಎಸ್.ಬಳಿಗಾರ, ರಾಚಯ್ಯ ರೊಟ್ಟಯ್ಯನವರಮಠ, ಅಶೋಕ ಮಾರಿಹಾಳ, ಬಸುರಾಜ ನರೇಗಲ್ಲ, ಆನಂದ ಮುಪ್ಪಯ್ಯನವರ, ಎಂ.ಎಂ.ಕಾಡೇಶನವರ, ಡಾ.ಡಿ.ವೈ.ಗರಗದ, ಈಶ್ವರ ಪೂಜೇರ, ಎಂ.ಪಿ.ಉಪ್ಪಿನ, ಮಡ್ಡೆಪ್ಪ ಹುಂಬಿ, ಎನ್.ಎಂ.ಕರೀಕಟ್ಟಿ, ಡಾ.ಆರ್.ಬಿ.ಪಾಟೀಲ ಇದ್ದರು.

ಈಶಪ್ರಭು ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ವಿವಿಧ ರೂಪಕಗಳೊಂದಿಗೆ ವೀರ ಜ್ಯೋತಿ ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net