ಬೆಳಗೊಳ ಗ್ರಾ.ಪಂ.ಗೆ ಬಿ.ವಿ.ಸುರೇಶ್ ಅಧ್ಯಕ್ಷ

17-08--krs1 (12)
Published on

ಕೆ.ಆರ್.ಸಾಗರ: ಸೋಮವಾರ ನಡೆದ ಬೆಳಗೊಳ ಗ್ರಾಪಂ ಅಧ್ಯಕ್ಷರಾಗಿ ಬಿ.ವಿ.ಸುರೇಶ್ ಮತ್ತು ಉಪಾಧ್ಯಕ್ಷೆಯಾಗಿ ವಿಜಯಲಕ್ಷ್ಮೀ ಅವಿರೋಧವಾಗಿ ಆಯ್ಕೆಯಾದರು.


ಒಟ್ಟು 26 ಸದಸ್ಯರು ಇರುವ ಬೆಳಗೊಳ ಗ್ರಾ.ಪಂ.ನಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆಗೆ ಮೀಸಲಾಗಿತ್ತು. ಇತ್ತೀಚೆಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿ.ವಿ.ಸುರೇಶ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ವಿಜಯಲಕ್ಷ್ಮೀ ಹೊರತುಪಡಿಸಿ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾದ ತಾಪಂ ಕಾರ್ಯನಿರ್ವಹಣಾಧಿಕಾರಿ ವೀಣಾ ರಾಜೇಗೌಡ ಅವಿರೋಧ ಆಯ್ಕೆ ಘೋಷಿಸಿದರು. ಸಹಾಯಕ ಚುನಾವಣಾಧಿಕಾರಿಯಾಗಿ ಪಿಡಿಒ ಪರಮೇಶ್ವರಪ್ಪ ಕಾರ್ಯನಿರ್ವಹಿಸಿದರು.

26 ಸದಸ್ಯರೂ ಚುನಾವಣೆಯಲ್ಲಿ ಭಾಗವಹಿಸಿ, ನೂತನ ಅಧ್ಯಕ್ಷರು-ಉಪಾಧ್ಯಕ್ಷಿಗೆ ಸದಸ್ಯರು ಅಭಿನಂದಿಸಿದರು. ಸದಸ್ಯರಾದ ರ‌್ಯಾಂಬೋ ರವಿಕುಮಾರ್, ಪುಟ್ಟರಾಜು, ಅರವಿಂದ ಕಾಂತರಾಜು, ನಂಜಯ್ಯ, ಆಶ್ವಿನಿ, ಸವಿತಾ, ರಾಧಾ, ಪ್ರಭಾ, ದಾಕ್ಷಾಯಣಿ, ಶಿವಕುಮಾರ್, ಪ್ರಕಾಶ್, ಕೃಷ್ಣ, ನಾಗಣ್ಣ, ಬಿ.ಎಂ.ಸ್ವಾಮಿಗೌಡ, ಬಿ.ಟಿ.ಸ್ವಾಮಿ, ಜಯರಾಂ, ತಾಪಂ ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ವೆಂಕಟೇಶ್, ಬಸವಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net