

ಚಿತ್ತಾಪುರ: ತಾಲೂಕಿನ ಬೆಳಗುಂಪಾ ಬೃಹನ್ಮಠದ ಹಿರಿಯ ಶ್ರೀ ಸಿದ್ಧಮುನಿಂದ್ರ ಶಿವಾಚಾರ್ಯರು (85) ಮಂಗಳವಾರ ಲಿಂಗೈಕ್ಯರಾಗಿದ್ದಾರೆ.
ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳು ಕಳೆದ ಒಂದು ತಿಂಗಳಿಂದ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ಮಧ್ಯಾಹ್ನ ಶಿವಪಾದ ಸೇರಿದ್ದಾರೆ.
ಇತ್ತೀಚೆಗೆ ರಂಭಾಪುರಿ ಜಗದ್ಗುರುಗಳು ಶ್ರೀಗಳ ಅರೋಗ್ಯ ವಿಚಾರಿಸಿ, ಆಶೀರ್ವದಿಸಿದ್ದರು. ಗ್ರಾಮದಲ್ಲಿ ನೀರವ ಮೌನ ಮನೆ ಮಾಡಿದ್ದೂ, ಅಪಾರ ಭಕ್ತರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.