ಬೆಳಗಿದ ದಾಸೋಹದ ಲಕ್ಷ ದೀಪ

klb appa temple
Published on

ಕಲಬುರಗಿ: ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ೨೦೩ನೇ ಮಹಾದಾಸೋಹ ಯಾತ್ರೆ ನಿಮಿತ್ತ ಭಾನುವಾರ ಇಳಿ ಸಂಜೆಯಲ್ಲಿ ಸಂಸ್ಥಾನದ ಆವರಣದಲ್ಲಿ ಲಕ್ಷ ದೀಪಗಳನ್ನು ಬೆಳಗಿಸಿ, ಶರಣರಿಗೆ ಭಕ್ತಿ ಸಮರ್ಪಿಸಲಾಯಿತು. ಮಹಾದಾಸೋಹ ಪೀಠಾಧಿಪತಿ ಶ್ರೀ ಡಾ.ಶರಣಬಸವಪ್ಪ ಅಪ್ಪ, ಮಾತೋಶ್ರೀ ಡಾ.ದಾಕ್ಷಾಯಣಿ ಅಪ್ಪ, ಚಿ.ದೊಡ್ಡಪ್ಪ ಅಪ್ಪ ಅವರ ಸಾನ್ನಿಧ್ಯದಲ್ಲಿ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು.

ನಗರ ಸೇರಿ ವಿವಿಧೆಡೆಯಿಂದ ಆಗಮಿಸಿದ ಭಕ್ತರು ದೀಪಗಳನ್ನು ಬೆಳಗಿಸಿದರು. ಸಾವಿರಾರು ಭಕ್ತರು ಶ್ರೀ ಶರಣಬಸವೇಶ್ವರರ ಜೈಘೋಷಣೆಗಳ ಮಧ್ಯೆ ಜ್ಯೋತಿಗಳನ್ನು ಬೆಳಗಿಸಲಾಯಿತು. ದೇವಸ್ಥಾನ ಎದುರು ನಿರ್ಮಿಸಿರುವ ನೂತನ ಅನುಭವ ಮಂಟಪವನ್ನು ಲೋಕಾರ್ಪಣೆ ಮಾಡಲಾಯಿತು.

ಮಹಾದಾಸೋಹ ಪೀಠಾಧಿಪತಿ ಶ್ರೀ ಡಾ.ಶರಣಬಸವಪ್ಪ ಅಪ್ಪ, ಮಾತೋಶ್ರೀ ಡಾ.ದಾಕ್ಷಾಯಣಿ ಅಪ್ಪ ಅವರ ವಾರ್ಷಿಕೋತ್ಸವ ನಿಮಿತ್ತ ನಾಗರಿಕ ಸಮ್ಮಾನ ಮಾಡಿ, ಶುಭ ಕೋರಿ, ಆಶೀರ್ವಾದ ಪಡೆಯಲಾಯಿತು. ಲಕ್ಷ ದೀಪಗಳು ಬೆಳಗಿದ್ದರಿಂದ ಇಡೀ ಶರಣರ ಆವರಣವೂ ದೀಪದ ಬೆಳಕಿನಲ್ಲಿ ಜಗಮಗಿಸಿತು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಆಡಳಿತಾಧಿಕಾರಿ ಡಾ.ಅಲ್ಲಮಪ್ರಭು ದೇಶಮುಖ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ದರಾಮಪ್ಪ ಪಾಟೀಲ್ ದಂಗಾಪುರ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ಲಕ್ಷಿö್ಮÃ ಪಾಟೀಲ್ ಮಾಕಾ, ಕಿರಣ ಪಾಟೀಲ್ ಸೇರಿ ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.

ಕು.ಶಿವಾನಿ ಅಪ್ಪ, ಕೋಮಲಾ ಅಪ್ಪ, ಮಹೇಶ್ವರಿ ಅಪ್ಪ, ಸ್ವಾಗತಿಸಿ, ಪ್ರಾರ್ಥನಾ ಮತ್ತು ದಾಸೋಹ ಗೀತೆ ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net