ಬೆಳಗಾವಿಯಲ್ಲಿ ನಿತ್ಯವೂ 250 ಟನ್ ಕಸ ಸಂಗ್ರಹ

CCB _BELGAUM
Published on

ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಜಮೀನು ಕೊಡಿ
ಬೆಳಗಾವಿ:
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿದಿನ 250 ಟನ್ ಕಸ ಉತ್ಪತ್ತಿಯಾಗುತ್ತಿದೆ. ಹಾಗೂ ಘನತ್ಯಾಜ್ಯ ವಸ್ತು ಏಲೇವಾಲಿ 2016 ರನ್ವಯ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಸದರಿ ತ್ಯಾಜ್ಯದ ಪ್ರಮಾಣ 300-400 ಟಿಪಿಡಿ ವರೆಗೂ ಉತ್ಪತ್ತಿಯಾಗುವ ಸಾಧ್ಯತೆ ಇರುವುದರಿಂದ, ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ವಿಕೇಂದ್ರಿಕೃತ ಘಟಕವನ್ನು ಸ್ಥಾಪಿಸುವುದು ಅತ್ಯವಶ್ಯವಾಗಿರುತ್ತದೆ. ಮಹಾನಗರ ಪಾಲಿಕೆ ವ್ಯಾಪ್ತಿಯ ಉತ್ತರ ವಿಭಾಗದಲ್ಲಿ ಅಥವಾ ಸುತ್ತ ಮುತ್ತಲಿನ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು 2 ವಿವಿಧ ಸ್ಥಳಗಳಲ್ಲಿ 2 ರಿಂದ 5 ಎಕರೆ ಹಾಗೂ ದಕ್ಷಿಣ ವಿಭಾಗದಲ್ಲಿ ಅಥವಾ ಸುತ್ತ-ಮುತ್ತಲಿನ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು 2 ವಿವಿಧ ಸ್ಥಳಗಳಲ್ಲಿ 2 ರಿಂದ 5 ಎಕರೆ ವರೆಗಿನ ಜಾಗದ ಅವಶ್ಯಕತೆ ಇರುತ್ತದೆ. ಕಾರಣ ಬೆಳಗಾವಿ ನಗರದ ಎರಡು ವಲಯಗಳಲ್ಲಿ ತಲಾ 2 ಬೇರೆ ಬೇರೆ ಸ್ಥಳಗಳಲ್ಲಿ 2 ರಿಂದ 5 ಎಕರೆ ಜಾಗೆಯನ್ನು ಖರೀದಿಗೆ ಅಥವಾ ಲೀಸ್ ಆಧಾರದ ಮೇಲೆ ಪಾಲಿಕೆಗೆ ನೀಡಲು ಆಸಕ್ತರಿರುವ ಸಾರ್ವಜನಿಕರು ಮಹಾನಗರ ಪಾಲಿಕೆ ಆಯುಕ್ತರನ್ನು ಖುದ್ದಾಗಿ ಭೇಟಿಯಾಗಬಹುದು ಎಂದು ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net