ಬೆಳಗಾವಿಯ ವಿವಿಧ ಪ್ರದೇಶಗಳಲ್ಲಿ ಆ.20ರಂದು ವಿದ್ಯುತ್ ವ್ಯತ್ಯಯ

HESCOM
Published on

ಬೆಳಗಾವಿ: ಸುವರ್ಣಸೌಧ 110 ಕೆವ್ಹಿ ಉಪಕೇಂದ್ರಲ್ಲಿ ತುರ್ತು ದುರಸ್ತಿ ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವುದರಿಂದ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಬರುವ ಬೆಳಗಾವಿ ನಗರ ವಿವಿಧ ಪ್ರದೇಶಗಳಲ್ಲಿ ಭಾನುವಾರ (ಆ.20) 2023 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯಾಗಲಿದೆ.
ಎಫ್-2 ಅಲಾರವಾಡಿ ವ್ಯಾಪ್ತಿಯ ಕೆ.ಎಚ್.ಬಿ ಕಾಲೋನಿ, ವೃದ್ರಾಶ್ರಮ ಪ್ರದೇಶ ಅಲ್ಲಾರವಾಡ ಮೇಲೆ ಬರುವ ಎಲ್ಲಾ ಪ್ರದೇಶಗಳು, ಎಫ್-3 ಸುವರ್ಣಸೌಧ ಲೈನ್-2 ಸುವರ್ಣಸೌಧ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯಾಗಲಿದೆ. ಅದೇ ರೀತಿಯಲ್ಲಿ ಎಫ್-4 ಸುವರ್ಣಸೌಧ ಲೈನ್-1 ವ್ಯಾಪ್ತಿಯ ಸುವರ್ಣಸೌಧ ಲೈನ್-1 ಪ್ರದೇಶಗಳು, ಎಫ್-5, ಬಸವೇಶ್ವರ ಸರ್ಕಲ್ ಶಾಹಾಪುರ್ ಗಡೆ ಮಾರ್ಗ, ಬಸವೇಶ್ವರ ಸರ್ಕಲ್, ಆಚಾರ್ಯ ಗಲ್ಲಿ, ನವಿಗಲ್ಲಿ, ನಾರ್ವೆಕರ್ ಗಲ್ಲಿ, ಬಿಚ್ಚು ಗಲ್ಲಿ, ಸರಾಫ್ ಗಲ್ಲಿಯ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯಾಗಲಿದೆ.
ಎಫ್-6 ಹರಿಕಾಕಾ ಕಂಪೌಂಡ, ಮಾರುತಿ ನಗರ, ಹರಿಕಾಕಾ ಕಂಪೌಂಡ ಪ್ರದೇಶಗಳು, ಎಫ್-8 ಪರ್ಯಾಯ ಸುವರ್ಣಸೌಧ, ಉದ್ಯಮಪರ್ಯಾಯ ಸುವರ್ಣಸೌಧ ಹಾಗೂ ಎಫ್-9 ಯಡಿಯುರಪ್ಪಾ ಮಾರ್ಗ್ ವ್ಯಾಪ್ತಿಯ ಸಾಂಯಿ ಕಾಲನಿ, ಯಡಿಯುರಪ್ಪಾ ಮಾರ್ಗ, ಹಲಗಾ ರೊಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯಾಗಲಿದೆ ಎಂದು ಹುವಿಸಕಂನಿ ಬೆಳಗಾವಿಯ ಕಾರ್ಯ ಮತ್ತು ಪಾಲನೆ ನಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net