

ಹುಬ್ಬಳ್ಳಿ: ರೈತರ ಪರವಾಗಿ ಏನೇ ಸಮಸ್ಯೆಗಳಿದ್ದರೂ ಜೀವನವಿಡಿ ಹೋರಾಟ ಮಾಡುತ್ತ ಬಂದಿದ್ದೇನೆ, ಮುಂದೆಯೂ ಹೋರಾಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ಶುಕ್ರವಾರ ಬೆಳಗಾವಿ ವಿಭಾಗ ಜೆಡಿಎಸ್ ಮುಖಂಡರ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಅತಿವೃಷ್ಟಿಯಿಂದ ಹಾನಿಯಾದ ಮುಂಬೈ ಕರ್ನಾಟಕ ಪ್ರದೇಶಗಳಿಗೆ ಅವಶ್ಯವಿದ್ದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಸಂಸತ್ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ. ರಾಜ್ಯ ಸರ್ಕಾರ ಸಂತ್ರಸ್ತರಿಗೆ ಅಗತ್ಯ ನೆರವು ಮತ್ತು ಸೌಲಭ್ಯ ಕಲ್ಪಿಸುವಲ್ಲಿ ವಿಫಲವಾಗಿದೆ. ರಾಜ್ಯಸಭೆಯಲ್ಲಿ ಸವಿಸ್ತಾರವಾಗಿ ಈ ಬಗ್ಗೆ ರ್ಚಚಿಸುತ್ತೇನೆ ಎಂದರು.
ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಗದಗ, ಬಾಗಲಕೋಟೆ, ವಿಜಾಪುರ ಜಿಲ್ಲೆಯ ಮಾಜಿ ಶಾಸಕರು, ಜೆಡಿಎಸ್ ಜಿಲ್ಲಾಧ್ಯಕ್ಷರು, ಕಳೆದ ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳು, ಮುಖಂಡರು ಹಾಗೂ ಕಾರ್ಯಕರ್ತರೊಡನೆ ಬೆಂಗಳೂರಿನಿಂದ ಮಾಜಿ ಪ್ರಧಾನಿ ದೇವೇಗೌಡರು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ತಿಪ್ಪೆಸ್ವಾಮಿ ವಿಡಿಯೋ ಸಂವಾದದಲ್ಲಿ ಭಾಗವಹಿಸಿ ರಾಜ್ಯದ ಜನರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ರ್ಚಚಿಸಿದರು ಎಂದು ಸಂವಾದದಲ್ಲಿ ಭಾಗಿಯಾಗಿದ್ದ ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ತಿಳಿಸಿದ್ದಾರೆ.
ಈ ಭಾಗದ ಸಮಸ್ಯೆಗಳನ್ನು ಜೆಡಿಎಸ್ ಜಿಲ್ಲಾಧ್ಯಕ್ಷರಾದ ಕೆ.ಪಿ. ಮಘಣ್ಣವರ ಚಿಕ್ಕೋಡಿ, ಶಂಕರ ಮಾಡಲಗಿ ಬೆಳಗಾವಿ, ಬಿ.ಬಿ. ಗಂಗಾಧರಮಠ ಧಾರವಾಡ, ಬಿ.ಆರ್. ನಾಯಕ ಉತ್ತರ ಕನ್ನಡ, ಮಲ್ಲಿಕಾರ್ಜುನ ಯೆಂಡಿಗೇರಿ ವಿಜಯಪುರ, ಅಂದಾನಯ್ಯ ಕುರ್ತಕೋಟಿಮಠ ಗದಗ, ಫಹೀಮ ಮುಜಾಹಿದ್ ಕಾಂಟ್ರಾ್ಯಕ್ಟರ್, ಮಲ್ಲಿಕಾರ್ಜುನ ಹಲಗೇರಿ, ಗುರುರಾಜ ಹುಣಸೀಮರದ, ಶಿವಶಂಕರ ಕಲ್ಲೂರ, ಮಂಗಾಳಾದೇವಿ ಬಿರಾದರ, ಇತರರು ಪ್ರಸ್ತಾಪಿಸಿದರು.