

ಬೆಳಗಾವಿ: ವರನಟ ಡಾ.ರಾಜಕುಮಾರ ಕಲೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ಅವರ ಸೌಜನ್ಯ ಬೇರೆಯವರಿಗೆ ಮಾದರಿ ಎಂದು ಡಾ.ಮುರುಗೇಶ ಬಾಬು ಹೇಳಿದರು.
ನಗರದ ಕನ್ನಡ ಭವನದಲ್ಲಿ ಬೆಳ್ಳಿ ಚುಕ್ಕಿ ಸಾಂಸತಿಕ ಅಕಾಡೆಮಿ ಮತ್ತು ಕನ್ನಡಭವನದ ಸಹಯೋಗದಲ್ಲಿ ಆಯೋಜಿಸಿದ್ದ ಡಾ.ರಾಜಕುಮಾರ್ ಅವರ 96ನೇ ಜನ್ಮದಿನ ಆಚರಣೆ ಮತ್ತು ಪಿ.ಬಿ.ಶ್ರೀನಿವಾಸ ಅವರ ಸವಿನೆನಪಿನ ನಿಮಿತ್ತ ಆಯೋಜಿಸಿದ್ದ ಸುನಾದಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತಿ ಯ.ರು.ಪಾಟೀಲರ ಮಾತನಾಡಿ, ಡಾ.ರಾಜ್ಕುಮಾರ ಕನ್ನಡದ ಸಂಸತಿ, ನಮ್ಮತನವನ್ನು ಬೆಳೆಸುವ ದಿಟ್ಟತನ ಹೊಂದಿದ್ದ ಮೇರುನಟ. ಅವರು ಕಲೆ ಉಸಿರಾಗಿಸಿಕೊಂಡವರು. ಶ್ರೀಕೃಷ್ಣ ದೇವರಾಯ, ಮಯೂರ, ಭಕ್ತ ಕುಂಬಾರ ಚಿತ್ರದಲ್ಲಿನ ಪಾತ್ರ ಮರೆಯಲಾಗದು ಎಂದರು.
ಡಾ.ರಾಜಕುಮಾರ ಅವರ ಮೊಮ್ಮಗಳಾದ ಸರಸ್ವತಿ ಕೋಸಗಿ ಮಾತನಾಡಿ, ಸಂಗೀತದಲ್ಲಿ ತಾತನನ್ನು ನೋಡಿ ಅಭಿರುಚಿ ಬೆಳೆಸಿಕೊಂಡಿರುವೆ. ಪಿ.ಬಿ.ಶ್ರೀನಿವಾಸ ಧ್ವನಿಯನ್ನೇ ನಮ್ಮ ತಾತನ ಧ್ವನಿ ಎಂದುಕೊಂಡಿದ್ದೇವು. ಈ ಇಬ್ಬರ ಧ್ವನಿಯೂ ತುಂಬ ಮನಮೋಹಕ. ಇಬ್ಬರು ದಿಗ್ಗಜ ಕಲಾವಿದರೂ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ರಾಜೇಶ್ವರಿ ಹಿರೇಮಠ "ನಾನೇ ಭಾಗ್ಯವತಿ' ವಸಂತ ಕಾನೆಟ್ಕರ ಅವರು "ಬೆಳ್ಳಿ ಮೂಡಿತೋ' ಮತ್ತು ಮಹೇಶ ಕುಲಕರ್ಣಿ "ಆರಾಧಿಸುವೇ ಮದನಾರಿ' ಗೀತೆಗಳ ಹಾಡಿ ರಂಜಿಸಿದರು. ಹೇಮಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಎಚ್.ಬಿ.ರಾಜಶೇಖರ, ಹಿರಿಯ ಸಾಹಿತಿ ಸರಜೂ ಕಾಟ್ಕರ್, ರತ್ನಪ್ರಭಾ ಬೆಲ್ಲದ ಉಪಸ್ಥಿತರಿದ್ದರು. ವಸಂತ ಕಾನೆಟ್ಕರ್ ಸ್ವಾಗತಿಸಿದರು. ಬೆಳ್ಳಿಚುಕ್ಕಿ ಸಾಂಸತಿಕ ಸಂದ ಅಧ್ಯೆ ರಾಜೇಶ್ವರಿ ಹಿರೇಮಠ ನಿರೂಪಿಸಿದರು. ಜಯಶ್ರೀ ನಾಯಕ ವಂದಿಸಿದರು.