

ಬೆಳಗಾವಿ: ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಹೊಂದುತ್ತಿರುವ ಬೆಳಗಾವಿ ನಗರವನ್ನು ಇನ್ನೂ ಹೆಚ್ಚು ಅಭಿವೃದ್ಧಿ ಮಾಡುವುದಕ್ಕೆ ಪಾಲಿಕೆ
ಚುನಾವಣೆಯಲ್ಲಿ ಜನರು ಬಿಜೆಪಿಗೆ ಮತ ಹಾಕಬೇಕು ಎಂದು ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಹೇಳಿದರು.
ನಗರದ ವಾರ್ಡ್ ನಂ. 32ರಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡಿ ಅಭಿವೃದ್ಧಿ ಕಾರ್ಯಗಳಿಗೆ ಜನರು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು. ಅದಕ್ಕೂ ಮೊದಲು ಮಾರ್ಕಂಡೇಯ ನಗರ, ಸಂಗಮೇಶ ನಗರ, ಸದಾಶಿವ ನಗರ, ಹನುಮಾನ ನಗರ, ಬಸವ ಕಾಲನಿ, ಬಸವನ ಕುಡಚಿಯ ದೇವರಾಜ ಅರಸು ಕಾಲನಿ, ಅಲಾರವಾಡ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸಿದರು.
ಸಂತೋಷ ಪೆಡ್ನೇಕರ್, ಜಯತೀರ್ಥ ಸವದತ್ತಿ, ಸ್ನೇಹಲ ಕೋಲೆ, ಸಂದೀಪ ಜಿರಗ್ಯಾಳ, ರೇಷ್ಮಾ ಪಾಟೀಲ, ಶ್ರೇಯಸ್ ನಾಕಾಡಿ, ರೂಪಾ ಚಿಕ್ಕಲದಿನ್ನಿ, ಡಾ.ಭೂಪಾಲ ಅಲಖನೂರೆ ಇತರರಿದ್ದರು.