ಯುವಪೀಳಿಗೆಗೆ ನಾಡಭಾಷೆಯ ಮಹತ್ವ ತಿಳಿಸಿ

01RAM-1-Web
ರಾಮದುರ್ಗ ತಾಪಂ ಸಭಾಂಗಣದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಶಾಸಕ ಮಹಾದೇವಪ್ಪ ಯಾದವಾಡ ಪೂಜೆ ಸಲ್ಲಿಸಿದರು. ಶಕುಂತಲಾ ವಡ್ಡರ, ಶಂಕ್ರೆಪ್ಪ ಬೆನ್ನೂರ, ರಾಘವೇಂದ್ರ ದೊಡಮನಿ, ಇತರರು ಇದ್ದರು.
Published on

ರಾಮದುರ್ಗ: ಐತಿಹಾಸಿಕ ಪರಂಪರೆ ಹೊಂದಿರುವ ಕನ್ನಡ ಭಾಷೆಯನ್ನು ಬೆಳೆಸಿ ಮುಂದಿನ ಪೀಳಿಗೆಗೆ ಅದರ ಮಹತ್ವ ತಿಳಿಸಿಕೊಡುವ ಜವಾಬ್ದಾರಿ ನಮ್ಮದಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲ ಪ್ರಯತ್ನಿದಾಗ ಮಾತ್ರ ಮಾತೃ ಭಾಷೆ ಉಳಿಯಲು ಸಾಧ್ಯವಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದ್ದಾರೆ.

ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕಾಡಳಿತದ ನೇತೃತ್ವದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿ, ಭಾರತದ ಇತಿಹಾಸಕ್ಕೆ ಕನ್ನಡ ಸಾಹಿತಿಗಳು, ಕವಿಗಳ ಕೊಡುಗೆ ಅಪಾರವಾಗಿದೆ. ಪಾಲಕರು ಮಕ್ಕಳಿಗೆ ಕನ್ನಡ ಭಾಷಾಭಿಮಾನದ ಜಾಗೃತಿ ಮೂಡಿಸಬೇಕು. ಆಗ ಮಾತ್ರ ನಾಡು, ನುಡಿ, ಭಾಷೆಯನ್ನು ಉಳಿಸಿ-ಬೆಳೆಸಿದಂತಾಗುತ್ತದೆ ಎಂದರು.

ವಿವಿಧ ವಿಭಾಗಗಳಲ್ಲಿ ಹೆಚ್ಚು ಅಂಕ ಪಡೆದ ತಾಲೂಕಿನ ವಿವಿಧ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಹಾಗೂ ಪೊಲೀಸ್ ಹುತಾತ್ಮ ದಿನಾಚರಣೆ ಪ್ರಯುಕ್ತ ಬಿ.ಇಡಿ ವಿದ್ಯಾರ್ಥಿಗಳ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ವಿತರಿಸಲಾಯಿತು. ತಾಪಂ ಅಧ್ಯಕ್ಷೆ ಶಕುಂತಲಾ ವಡ್ಡರ, ಪುರಸಭೆ ಅಧ್ಯಕ್ಷ ಶಂಕ್ರೆಪ್ಪ ಬೆನ್ನೂರ, ಉಪಾಧ್ಯಕ್ಷ ರಾಘವೇಂದ್ರ ದೊಡಮನಿ, ಎಪಿಎಂಸಿ ಅಧ್ಯಕ್ಷ ದ್ಯಾವಪ್ಪ ಬೆಳವಡಿ, ರೇಣಪ್ಪ ಸೋಮಗೊಂಡ, ಕೃಷ್ಣಪ್ಪ ಲಮಾಣಿ, ತಹಸೀಲ್ದಾರ್ ಸೋಮಶೇಖರ ತಂಗೊಳ್ಳಿ, ತಾಪಂ ಇಒ ಮುರಳೀಧರ ದೇಶಪಾಂಡೆ, ಪಿ.ಡಿ.ಕಾಲವಡ, ಆನಂದ ಜೋಶಿ, ಮುಖ್ಯಶಿಕ್ಷಕ ಜಿ.ಎಂ.ಹುಲ್ಲೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net