ಬೆಳಗಾಂ ಶುಗರ್ಸ್​ನಿಂದ ಸಕ್ಕರೆ ವಿತರಣೆ

suger-500x500
Published on

ಬೆಳಗಾವಿ: ಕಳೆದ 2022&23ರ ಹಂಗಾಮಿನಲ್ಲಿ ಬೆಳಗಾಂ ಶುಗರ್​ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ರಿಯಾಯಿತಿ ದರದಲ್ಲಿ ಜು.31ರಿಂದ ಭಾನುವಾರದ ರಜೆ ಹೊರತುಪಡಿಸಿ ಹುದಲಿಯ ಬೆಳಗಾಂ ಶುಗರ್​ ಪೈ.ಲಿ. ಕಾರ್ಖಾನೆ ಆವರಣದಲ್ಲಿ ವಿತರಿಸಲಾಗುವುದು.

ಪ್ರತಿ ಟನ್​ ಕಬ್ಬಿಗೆ 500 ಗ್ರಾಂ ತೂಕದಂತೆ ಸಕ್ಕರೆಯನ್ನು ಪ್ರತಿ ಕೆಜಿಗೆ 20 ರೂ. ರಿಯಾಯಿತಿ ದರದಲ್ಲಿ ವಿತರಿಸಲು ಕಾರ್ಖಾನೆಯ ಆಡಳಿತ ಮಂಡಳಿ ನಿರ್ಧರಿಸಿದೆ. ಕಬ್ಬು ಪೂರೈಸಿದ ಎಲ್ಲ ರೈತರು ಖುದ್ದಾಗಿ ಅಥವಾ ತಮ್ಮ ಪ್ರತಿನಿಧಿ ಮೂಲಕ ಕಾರ್ಖಾನೆಯ ಆವರಣದ ಸಕ್ಕರೆ ವಿತರಣಾ ಕೇಂದ್ರದಲ್ಲಿ ಕಬ್ಬಿನ ತೂಕದ ಪಾವತಿ, ಗುರುತಿನ ಚೀಟಿ ಹಾಗೂ ಪ್ರತಿನಿಧಿಯಾಗಿದ್ದಲ್ಲಿ ಸಂಬಂಧಪಟ್ಟ ವಲಯ ಕಚೇರಿಗಳಿಂದ ಅನುಮೋದಿಸಲ್ಪಟ್ಟ ಸಮ್ಮತಿ ಪತ್ರ ಕಡ್ಡಾಯವಾಗಿ ಹಾಜರುಪಡಿಸಿ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net