ಬೆಳಕೂಡ ಶಾಲೆಗೆ ಹೈಟೆಕ್​ ಶೌಚಗೃಹ

1
ಚಿಕ್ಕೋಡಿ ತಾಲೂಕಿನ ಬೆಳಕೂಡ ಗ್ರಾಮದಲ್ಲಿ ಶಾಸಕ ಡಿ.ಎಂ.ಐಹೊಳೆ ಶಾಲಾ ಕೊಠಡಿ ಉದ್ಘಾಟಿಸಿದರು. ಚಂದ್ರಶೇಖರ ಅರಭಾಂವಿ, ಬಸವರಾಜ ಕುಂಬಾರ, ಸಂಭಾಜಿ ಚವ್ಹಾಣ, ಮಹಾಂತೇಶ ಚವ್ಹಾಣ, ಮಲ್ಲು ಅರಭಾಂವಿ ಇತರರಿದ್ದರು.
Published on


ಚಿಕ್ಕೋಡಿ: ಬೆಳಕೂಡ ಗ್ರಾಮದ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹೈಟೆಕ್​ ಶೌಚಗೃಹ ನಿರ್ಮಿಸಲಾಗುವುದು ಎಂದು ರಾಯಬಾಗ ಶಾಸಕ ಡಿ.ಎಂ.ಐಹೊಳೆ ಹೇಳಿದರು.

ತಾಲೂಕಿನ ಬೆಳಕೂಡ ಗ್ರಾಮದ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿವೇಕ ಯೋಜನೆಯಡಿ ನೂತನ ಕೊಠಡಿಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿ,
ಶಾಲೆಗೆ ಸರ್ಕಾರದಿಂದ ಮೂಲಸೌಲಭ್ಯ ಕಲ್ಪಿಸಲು ಬದ್ಧನಿದ್ದು, ಶಿಕರು ಮಾನವೀಯ ಮೌಲ್ಯಗಳುಳ್ಳ ಶಿಣ ನೀಡಬೇಕೆಂದರು. ಕರಗಾಂವ ಏತ ನೀರಾವರಿ ಯೋಜನೆಗೆ 1 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಮುಂಬರುವ ದಿನಗಳಲ್ಲಿ ಉಳಿದ ಅನುದಾನ ಬಿಡುಗಡೆಗೊಳಿಸುವ ಮೂಲಕ ಯೋಜನೆ ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು ಎಂದರು.

ಶಿಕ ಚಂದ್ರಶೇಖರ ಅರಬಾಂವಿ ಪ್ರಾಸ್ತಾವಿಕ ಮಾತನಾಡಿ, ಕರಗಾಂವ ಏತ ನೀರಾವರಿ ಯೋಜನೆಗೆ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯ ಎಂದರು.
ಸದಾಶಿವ ೂರ್ಪಡೆ, ಗ್ರಾಪಂ ಮಾಜಿ ಅಧ್ಯ ಬಸವರಾಜ ಕುಂಬಾರ, ಸಂಭಾಜಿ ಚವ್ಹಾಣ, ಮಹಾಂತೇಶ ಚವ್ಹಾಣ, ಮಲ್ಲು ಅರಬಾಂವಿ, ದೇವರಾಜ ಪಾಶ್ಚಾಪುರೆ, ನಂದಕುಮಾರ ಖಟಾವಿ, ಬಸವಣ್ಣಿ ಕವಣಿ, ಉಮೇಶ ತೋಟದ, ಜಯಶ್ರೀ ಮಸರಗುಪ್ಪಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net