ಬೆಲ್ಲದ ಸಹೋದರರಿಗೆ ಸದ್ಭಾವನಾ ಪ್ರಶಸ್ತಿ

Oplus_16908288
Oplus_16908288
Published on

ಕಬ್ಬೂರ: ಪಟ್ಟಣದ ಜೋಡಕುರಳಿ ಗ್ರಾಮದ ಹಮ್ಮಿಕೊಂಡಿದ್ದ ಶ್ರೀಗುರು ಸಿದ್ಧಾರೂಢ ಭಾರತಿ ಮಹಾರಾಜರ ಶಿವಭಜನೆ ಸಪ್ತಾಹ ಕಾರ್ಯಕ್ರಮದಲ್ಲಿ ಉದ್ಯಮಿ ಮಹೇಶ ಬೆಲ್ಲದ ಹಾಗೂ ಅವರ ಸಹೋದರ ಜಲಯೋಗ ಸಾಧಕ ಡಾ.ಪ್ರಕಾಶ ಬೆಲ್ಲದ ಇವರಿಗೆ ಈಚೆಗೆ ಶ್ರೀ ಸಿದ್ಧಾರೂಢ ಸ್ವಾಮಿ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಉದ್ಯಮಿ ಮಹೇಶ ಬೆಲ್ಲದ ಸಾಮಾಜಿಕ ಕ್ಷೇತ್ರದಲ್ಲಿ ಹಲವಾರು ಸೇವೆ ಹಾಗೂ ಹಳ್ಳಿಯ ವಿಚಾರಗಳ ಜಾಗತೀಕರಣ ಧ್ಯೇಯ ವಾಕ್ಯದಡಿಯಲ್ಲಿ ೧೦೦ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಿ ತಂತ್ರಜ್ಞಾನ ಮೂಲಕ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಯೋಗವನ್ನು ಸಾಮಾನ್ಯವಾಗಿ ನೆಲದ ಮೇಲೆ ಮಾಡಲು ಒದ್ದಾಡುವ ಕಾಲದಲ್ಲಿ ಅವರ ಸಹೋದರ ಡಾ.ಪ್ರಕಾಶ ಬೆಲ್ಲದ ಸುಲಭವಾಗಿ ನೀರಿನಲ್ಲಿ ಜಲಯೋಗದಿಂದ ದೇಶಕ್ಕೆ ಮಾದರಿಯಾಗಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ೭೩ನೇ ವಯಸ್ಸಿನಲ್ಲಿಯೂ ಕಾಯಿಲೆಗಳಿಲ್ಲದೆ ಸಮಾಜಕ್ಕೆ ಮಾದರಿಯಾದ ಇವರಿಗೆ ಶ್ರೀಸಿದ್ಧಾರೂಢ ಸ್ವಾಮಿ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜೋಡಕುರಳಿಮಠದ ಚಿದ್ಘಾನಾನಂದ ಭಾರತಿ ಸ್ವಾಮೀಜಿ, ಚಿಕ್ಕೋಡಿ ಚರಮೂರ್ತಿಮಠ ಸಂಪಾದನಾ ಸ್ವಾಮೀಜಿ, ಅಭಿನವಬ್ರಹ್ಮಾನಂದ ಸ್ವಾಮೀಜಿ, ಮತೋಶ್ರೀ ಅನಸೊಯಾ ತಾಯಿ, ವಾಗ್ಮಿ ಹಾರಿಕಾ ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net