ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಅದ್ದೂರಿ ರಾಮನವಮಿ ಆಚರಣೆ

6Anand3
Published on

ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಅದ್ದೂರಿ ರಾಮನವಮಿ ಆಚರಣೆ

ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:

ಶ್ರೀ ರಾಮನವಮಿಯನ್ನ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಸಡಗರ ಸಂಭ್ರಮದಿಂದ ಭಾನುವಾರ ಆಚರಣೆ ಮಾಡಲಾಯಿತು.

ಬೆಲ್ಲದ ಬಾಗೇವಾಡಿ ಗ್ರಾಮದ ಶ್ರೀ ವಿಠ್ಠಲ ಭಜನಾ ಮಂಡಲದಿಂದ ಆಯೋಜನೆ ಮಾಡಿದ್ದ ರಾಮನವಮಿ ಕಾರ್ಯಕ್ರಮದಲ್ಲಿ ಗ್ರಾಮದ ಮಹಿಳೆಯರು ಭಾಗಿಯಾಗಿ ಶ್ರೀ ಬಾಲರಾಮನಿಗೆ ನಾಮಕರಣ ಮಾಡಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಹಿಳೆಯರು ತೊಟ್ಟಿಲು ತೂಗಿ ಬಾಲರಾಮನ ನಾಮಕರಣ ಮಾಡಿ ಅರ್ಥಪೂರ್ಣವಾಗಿ ರಾಮನವಮಿ ಆಚರಣೆ ಮಾಡಿದರು.

ಗ್ರಾಮದ ಹಿರಿಯರಾದ ಶಕುಂತಲಾ ರಾಮದುರ್ಗ ಮಾತನಾಡಿ ಶ್ರೀ ರಾಮ ಎನ್ನುವದು ನಮ್ಮ ದೇಶದ ಅಸ್ತಿತ್ವ. ಪ್ರತಿಯೊಬ್ಬರು ‌ಶ್ರೀ ರಾಮನ ತತ್ವಗಳನ್ನ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ರಾಮ‌ರಾಜ್ಯ ಸ್ಥಾಪಿಸಲು ಸಾಧ್ಯವಾಗಲಿದೆ ಎಂದರು.

ವಿಜಯಲಕ್ಷ್ಮಿ ಶೆಟ್ಟಿ, ಪೂರ್ಣಿಮಾ ಕತ್ತಿ, ಸುನೀತಾ ದೇಶಪಾಂಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net