ಬೆಲೆ ಏರಿಸುತ್ತಿರುವ ಪ್ರಧಾನಿಗೆ ಅಭಿನಂದನೆ

14 BGV gok 1-Web
ತೈಲ ಬೆಲೆ ಏರಿಕೆ ಖಂಡಿಸಿ ಗೋಕಾಕದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದರು. ನಜೀರ್ ಶೇಖ್, ವಿವೇಕ ಜತ್ತಿ, ಬಸವರಾಜ ಸಾಯನ್ನವರ ಇತರರಿದ್ದರು.
Published on

ಗೋಕಾಕ: ಕೇಂದ್ರ ಸರ್ಕಾರ ತೈಲ ಬೆಲೆ ಏರಿಕೆ ಮಾಡುತ್ತಿರುವುದನ್ನು ಖಂಡಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ವಿನೂತನವಾಗಿ ಪ್ರತಿಭಟಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರಂತೆ ಧಿರಿಸು ಹಾಕಿ, ಅವರ ಮುಖದ ೆಟೋವನ್ನು ಅಳವಡಿಸಿಕೊಂಡ ಪಕ್ಷದ ಕಾರ್ಯಕರ್ತನೋರ್ವನಿಗೆ ಸನ್ಮಾನ ಮಾಡಿದರು. ದಿನವೂ ತೈಲಬೆಲೆ ಏರಿಕೆ ಮಾಡುತ್ತಿರುವುದಕ್ಕೆ ಲ-ಪುಷ್ಪ ನೀಡಿ ಅಭಿನಂದನೆ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತನಾಡಿ, ತೈಲ ಬೆಲೆ ದಿನೇದಿನೆ ಏರಿಕೆಯಾಗುತ್ತಿರುವುದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ. ಕೇಂದ್ರದ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಈ ಹೋರಾಟ ಯಶಸ್ಸು ಕಾಣಬೇಕಾದರೆ, ಸಾರ್ವಜನಿಕರೂ ಪಕ್ಷಾತೀತವಾಗಿ ಭಾಗವಹಿಸಬೇಕು ಎಂದರು. ನಜೀರ್ ಶೇಖ್, ವಿವೇಕ ಜತ್ತಿ, ಬಸವರಾಜ ಸಾಯನ್ನವರ, ಜಾಕಿರ್ ನದ್ಾ,ನಗರಸಭೆ ಸದಸ್ಯ ಭಗವಂತ ಹೂಳಿ, ಕಲ್ಲಪ್ಪಗೌಡ ಲಕ್ಕಾರ, ಕಲ್ಪನಾ ಜೋಶಿ, ಯಶೋದಾ ಬಿರಡಿ, ಶಿವು ಪಾಟೀಲ, ಬಸವರಾಜ ಹತ್ತರಕಿ, ಬಾಬು ಶೇಖಬಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net