ಬೆಲೆ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ

CTD BELE ERIKE MUSHKARAA----
Published on

ಚಿತ್ರದುರ್ಗ: ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಸ್ಲಂಜನಾಂದೋಲನ-ಕರ್ನಾಟಕ, ಸಾವಿತ್ರಿಬಾ ಫುಲೆ ಮಹಿಳಾ ಸಂಘಟನೆ ಜಿಲ್ಲಾ ಘಟಕದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.

ಐದು ಗ್ಯಾರಂಟಿಗಳನ್ನು ಘೋಷಿಸಿ ಮತ ಪಡೆದು ಅಧಿಕಾರಕ್ಕೆ ಬಂದ ನಂತರ ಕೊಟ್ಟ ಭರವಸೆ ಉಳಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಸಿ ಜನಸಾಮಾನ್ಯರು ತತ್ತರಿಸುವಂತೆ ಮಾಡಿದ್ದಾರೆ. ಹಾಲು, ವಿದ್ಯುತ್, ಡೀಸೆಲ್ ಬೆಲೆ ಏರಿಸಿರುವುದಲ್ಲದೆ ತ್ಯಾಜ್ಯ ಸಂಗ್ರಹ, ಟೋಲ್ ಶುಲ್ಕ, ಆಸ್ತಿ ಮೇಲಿನ ತೆರಿಗೆಗಳನ್ನು ಹೆಚ್ಚಿಸಿದೆ. ಮೆಟ್ರೋ ದರ ಕೂಡ ಜಾಸ್ತಿಯಾಗಿದೆ. ಬಡವರ ಹಿತ ಕಾಪಾಡುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರ ಅಧಿಕಾರದಿಂದ ಕೆಳಗಿಳಿಯಲಿ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಸ್ಲಂ ಜನಾಂದೋಲನ-ಕರ್ನಾಟಕದ ಜಿಲ್ಲಾ ಸಂಚಾಲಕಿ ಡಿ. ಸುಧಾ ಒತ್ತಾಯಿಸಿದರು.

ಲೀಲಾವತಿ, ರತ್ನಮ್ಮ, ತೇಜೇಶ್ವರಿ, ಪಿ. ಉಮಾದೇವಿ, ಎಂ. ಮಂಜುಳಾ, ಜಿ. ರೇಷ್ಮಾ, ವಸಂತಮ್ಮ, ಜಯಮ್ಮ, ಶಾಂತಮ್ಮ, ಮಂಜಮ್ಮ, ಶಾಂತಮ್ಮ, ಪಾಪಮ್ಮ, ಕವಿತಾ, ಶಿಲ್ಪಾ, ಗಂಗಮ್ಮ, ಸರಿತಾ, ದೇವಮ್ಮ,ಶ್ರೀಲಕ್ಷ್ಮೀ, ಮಹೇಶ ಹೊನ್ನೂರು ಮತ್ತಿತರರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net