ಬೆಲೆ ಏರಿಕೆ ಖಂಡಿಸಿ ಬೆಂಗಳೂರಲ್ಲಿ ಅಹೋರಾತ್ರಿ ಧರಣಿ

CTD A.MURULI....
Published on

ಚಿತ್ರದುರ್ಗ: ಅಗತ್ಯ ವಸ್ತುಗಳ ಬೆಲೆ ಏರಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಂಗಳೂರು ಫ್ರೀಡಂಪಾರ್ಕ್‌ನಲ್ಲಿ ಏ.2ರಂದು ನಡೆಯಲಿರುವ ಅಹೋರಾತ್ರಿ ಧರಣಿಯಲ್ಲಿ ಚಿತ್ರದುರ್ಗ ಜಿಲ್ಲೆಯಿಂದ 250ಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ತಿಳಿಸಿದ್ದಾರೆ.

ಬೆಲೆ, ತೆರಿಗೆ ಹೆಚ್ಚಳದ ಮೂಲಕ ಬಡವರಿಗೆ ಬರೆ ಎಳೆಯುವ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟಿಸಲಿದೆ. ಶೂನ್ಯ ಅಭಿವೃದ್ಧಿಯ ಮತ್ತು ಹಗರಣಗಳ ಸರ್ಕಾರ ಇದಾಗಿದೆ. ಹಗರಣ, ಜನವಿರೋಧಿ ನೀತಿ ವಿರುದ್ಧ ಬಿಜೆಪಿ ನಿರಂತರ ಹೋರಾಟ ನಡೆಸಲಿದೆ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದಂದಿನಿಂದ ಪೆಟ್ರೋಲ್, ಡೀಸೆಲ್, ಸ್ಟಾೃಂಪ್‌ಡ್ಯೂಟಿ, ಹಾಲಿನ ದರ, ಮೆಟ್ರೋ ಪ್ರಯಾಣ ದರ ಏರಿಸಲಾಗಿದೆ. ಅತ್ಯಂತ ದುಬಾರಿ ಜೀವನ ನಡೆಸಬೇಕಾದ ಈ ನಾಡಿನ ಜನರ ದುಸ್ಥಿತಿಗೆ ಕಾಂಗ್ರೆಸ್ ಕಾರಣವಾಗಿದೆ. ಜನ ಸಾಮಾನ್ಯರ, ರೈತರ ಸಂಕಷ್ಟ ಅರ್ಥ ಮಾಡಿಕೊಳ್ಳದ ಶಾಪಗ್ರಸ್ತ ಸರ್ಕಾರವಾಗಿದೆ ಎಂದಿದ್ದಾರೆ.

ರಾಜ್ಯಬಜೆಟ್‌ನಲ್ಲಿ ಮುಸ್ಲಿಮರನ್ನು ಓಲೈಸುವ ಭರದಲ್ಲಿ ಹಿಂದುಗಳಿಗೆ ಅವಮಾನ ಮಾಡಲಾಗಿದೆ. ಸರ್ಕಾರಿ ಕಾಮಗಾರಿಗಳಲ್ಲಿ ಶೇ.4 ಮೀಸಲು ನೀಡಿರುವುದು ಕಾನೂನಿಗೆ ವಿರುದ್ಧ. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚುವಂಥ ಕೆಲಸ ಮಾಡಿದೆ ಎಂದು ಟೀಕಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net