ಬೆರಳಚ್ಚುಗಾರರ ನೇಮಕಾತಿ ರದ್ದು

Published on

ಬಳ್ಳಾರಿ : ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ ಮಾಡಿದ್ದ ಬೆರಳಚ್ಚುಗಾರರು ಮತ್ತು ಬೆರಳಚ್ಚು ನಕಲುಗಾರರ ಹುದ್ದೆಗಳ ನೇಮಕಾತಿಯ ಪ್ರಕ್ರಿಯೆಯನ್ನು ಜಿಲ್ಲಾ ನ್ಯಾಯಾಧೀಶೆ ಎಸ್.ಎಚ್.ಪುಷ್ಪಾಂಜಲಿದೇವಿ ಅವರು ಶುಕ್ರವಾರ ರದ್ದುಮಾಡಿದ ಆದೇಶ ಪತ್ರ ಹೊರಡಿಸಿದ್ದಾರೆ. ಅವರು ಆದೇಶದಲ್ಲಿ ಉಚ್ಚನಾಯಾಯಲಯದ ಸೂಚನೆಯಂತೆ ರದ್ದು ಮಾಡಲಾಗಿದೆ ಎಂದು ನೇಮಕಾತಿ ಪ್ರಕ್ರಿಯೆಯ ದಿನಾಂಕ ಸಮೇತ ಪತ್ರದಲ್ಲಿ ವಿವರಿಸಿದ್ದಾರೆ. ಕಳೆದ ತಿಂಗಳು ನೇಮಕಾತಿಗೆ ಸಂದರ್ಶನ ನಡೆಸಲಾಗಿತ್ತು. ಅರ್ಹವಾದವರಿಗೆ ಹುದ್ದೆ ಸಿಗದೆ, ಅನರ್ಹರಿಗೆ ಕೆಲವರು ಶಿಫಾರಸ್ಸು ಮಾಡಿದವರಿಗೆ ಹುದ್ದೆ ನೀಡಿದೆಂದು ಅರ್ಹ ಅಭ್ಯರ್ಥಿಗಳು ಉಚ್ಚನ್ಯಾಯಾಲಯಕ್ಕೆ ದೂರು ನೀಡಿದ ಹಿನ್ನಲೆಯಲ್ಲಿ. ಆ ನ್ಯಾಯಾಲಯ ನೇಮಕಾತಿ ರದ್ದುಗೆ ಸೂಚಿಸಲಾಗಿದೆ. ಈ ರೀತಿ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ನೇಮಕಾತಿಗಳು ರದ್ದಾಗಿರುವ ಇತಿಹಾಸ ಕಳೆದ ಎರಡು ದಶಕಗಳಿಂದ ನಡೆದಿಲ್ಲ. ನೇಮಕಾತಿ ಮಾಡಿದ್ದ ಜಿಲ್ಲಾ ನ್ಯಾಯಾಧೀಶರು ಭಾನುವಾರ ನಿವೃತ್ತಿಯಾಗುತ್ತಿದ್ದು. ಇಂತಹ ಸಂದರ್ಭದಲ್ಲಿ ಅವರು ಮಾಡಿದ ನೇಮಕಾತಿಯ ಆದೇಶವನ್ನು ಅವರೇ ರದ್ದುಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net