

ಕೆಜಿಎಫ್: ಬಿಇಎಂಎಲ್ ಕಾರ್ಖಾನೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರನ್ನು ಕಾಯಂಗೊಳಿಸಲು ಸಾಧ್ಯವಾಗುವುದಿಲ್ಲ. ಆದರೆ, ಇತರ ಬೇಡಿಕೆ ಈಡೇರಿಸಲು ಬಿಇಎಂಎಲ್ ಸಿಎಂಡಿಯೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಸಂಸದ ಮಲ್ಲೇಶ್ಬಾಬು ಹೇಳಿದರು.
ನಗರ ಹೊರವಲಯದ ಫೈವ್ಲೈಟ್ಸ್ ಬಳಿ ನಾಲ್ಕು ದಿನದಿಂದ ಕೈಗೊಂಡಿರುವ ಅರ್ನಿದಿಷ್ಟಾವಧಿ ಮುಷ್ಕರದ ಸ್ಥಳಕ್ಕೆ ಶನಿವಾರ ಭೇಟಿ ನೀಡಿ, ಮಾತನಾಡಿದ ಅವರು, ಹೊರ ಗುತ್ತಿಗೆ ಆಧಾರದ ಮೇರೆಗೆ ನೌಕರಿ ಮಾಡುತ್ತಿರುವ 1,100 ಕಾರ್ಮಿಕರನ್ನು ಕಾಯಂಗೊಳಿಸಲು ಮುಂದಾದರೆ ಇತರ ಸರ್ಕಾರಿ ಕಾರ್ಖಾನೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಕಾರ್ಮಿಕರನ್ನು ಕಾಯಂಗೊಳಿಸಬೇಕಾಗುತ್ತದೆ, ಅದು ಸಾಧ್ಯವಾಗದ ಮಾತು ಎಂದು ಹೇಳಿದರು.
ಸುಳ್ಳು ಆಶ್ವಾಸನೆ ನೀಡಿ ಹೊಗುವುದು ನನಗೆ ಇಷ್ಟವಿಲ್ಲ. ಕಾರ್ಮಿಕರ ವೇತನ ಪರಿಷ್ಕರಣೆಗೊಳಿಸಬೇಕಿದ್ದು, ಹೊರಗುತ್ತಿಗೆ ಪಡೆದಿರುವ ಕಂಪನಿಯ ಅಧಿಕಾರಿ ಹಾಗೂ ಬೆಮೆಲ್ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಅಲ್ಲಿ ಪರಿಹಾರ ಸಿಗದೇ ಇದ್ದಲ್ಲಿ ನ.25 ರಿಂದ ಪ್ರಾರಂಭವಾಗಲಿರುವ ಲೋಕಸಭಾ ಅಧಿವೇಶನದಲ್ಲಿ ವಿಷಯ ಪ್ರಸ್ತಾಪ ಮಾಡುತ್ತೇನೆ ಎಂದು ನುಡಿದರು.
ನ.13ರ ಉಪಚುನಾವಣೆ ಬಳಿಕ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮತ್ತು ರಕ್ಷಣಾ ಸಚಿವರನ್ನು ಭೇಟಿಯಾಗಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ. ಆದ್ದರಿಂದ ಪ್ರತಿಭಟನೆ ಕೈಬಿಡುವುದು ಅಥವಾ ಮುಂದು ವರಿಸುವ ಬಗ್ಗೆ ತೀಮಾರ್ನ ಕೈಗೊಳ್ಳಬೇಕು ಎಂದು ಹೇಳಿದರು.
ಬಿಇಎಂಎಲ್ ಸಿಎಂಡಿ ಯೊಂದಿಗೆ ನೀವು ಮಾತುಕತೆ ನಡೆಸಿ ನಿಮ್ಮ ಉತ್ತರಕ್ಕಾಗಿ ನಾವುಗಳು ಕಾಯುತ್ತೇವೆ ಎಂದ ಕಾರ್ಮಿಕರು, ಅಲ್ಲಿಯವರೆಗೆ ನಾವು ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು.ಈ ವೇಳೆ ಹೊರ ಗುತ್ತಿಗೆ ಕಾರ್ಮಿಕರ ಮುಖಂಡರು 3 ತಿಂಗಳ ಹಿಂದೆ ನೌಕರಿ ಕಾಯಂಗೊಳಿಸಬೇಕು ವೇತನ ಪರಿಷ್ಕರಣೆಗೊಳಿಸಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ಬಿಇಎಂಎಲ್ ಕಾರ್ಖಾನೆ ಮುಂಭಾಗದಲ್ಲಿ ಹೋರಾಟ ಮಾಡಿದಾಗ ಸ್ಥಳಕ್ಕೆ ಬಂದ ತಾವು ಬೆಮೆಲ್ ಆಡಳಿತ ಮಂಡಳಿಯೊಂದಿಗೆ ಮಾತಕತೆ ನಡೆಸಲಾಗಿತ್ತು.
ಬೆಮೆಲ್ ಆಡಳಿತ ಮಂಡಳಿ 1 ತಿಂಗಳಲ್ಲಿ ಕಾರ್ಮಿಕರ ಸಮಸ್ಯೆ ಬಗೆಹರಿಸಲಾಗುವುದು ಎಂಬ ಆಶ್ವಾಸನೆ ನೀಡಿದ್ದರು. ಆದರೆ ಇದುವರೆಗೂ ಕಾರ್ಮಿಕರನ್ನು ಮಾತುಕತೆಗೆ ಕರೆಯದೆ ರ್ನಿಲಕ್ಷ$್ಯ ಮಾಡಿದ್ದಾರೆ. ಆದ್ದರಿಂದ ಅನಿವಾರ್ಯವಾಗಿ ಮುಷ್ಕರಕ್ಕೆ ಕರೆ ನೀಡಬೇಕಾಯಿತು. ನೀವು ಬೆಮೆಲ್ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿ ನಮಗೆ ವೇತನ ಪರಿಷ್ಕರಣೆ ಮಾಡಿದರೆ ಕೆಲಸಕ್ಕೆ ತೆರಳುತ್ತೇವೆ ಎಂದು ಹೇಳಿದರು.