ಬೆಮೆಲ್ ಖಾಸಗೀಕರಣ ಖಂಡಿಸಿ ನಿವೃತ್ತ ನೌಕರರಿಂದ ಪ್ರತಿಭಟನೆ

Published on

ಬೆಮಲ್ ನಿವೃತ್ತ ನೌಕರರಾದ ಆರ್.ರಾಜಶೇಖರನ್, ವಿ.ಮುನಿರತ್ನಂ, ಅಶೋಕ್ ಲೋನಿ, ಆರ್.ಶ್ರೀನಿವಾಸ್, ಜಯಶೀಲನ್, ಟಿ.ಎಂ ವೆಂಕಟೇಶ್, ಎನ್ ಎನ್ ಶ್ರೀರಾಮ್, ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಅ.ಕೃ ಸೋಮಶೇಖರ್, ಜೆಎಂಎಸ್‍ನ ವಿಜಯಕುಮಾರಿ, ಆಶಾ,ಭೀಮರಾಜ್, ನಾರಾಯಣರೆಡ್ಡಿ ಇತರರು ಪಾಲ್ಗೊಂಡಿದ್ದರು.

ಕಾರ್ಮಿಕ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ ಖಾಸಗಿ ಕಾಪೆರ್Çರೇಟ್ ಸಂಸ್ಥೆಗಳಿಗೆ ಮಣೆ ಹಾಕಲು ಹೊರಟಿರುವ ಕೇಂದ್ರ ಸರ್ಕಾರದ ನಡೆ ಖಂಡನಾರ್ಹ. ಸರ್ಕಾರದ ಇಂತಹ ನಿಲುವಿನಿಂದ ದೇಶದ ಸಮಗ್ರತೆ ,ಭದ್ರತೆಗೆ ಧಕ್ಕೆಯಾಗುವ ಜತೆಗೆ ದೇಶದ ಅಭಿವೃದ್ಧಿಗೆ ಮಾರಕ, ಉದ್ಯೋಗ ಭದ್ರತೆಗೆ ಧಕ್ಕೆ ಉಂಟಾಗಲಿದೆ. ಮೀಸಲಾತಿ ಆಧಾರದ ನೇಮಕ ಪ್ರಕ್ರಿಯೆಗಳು ಸ್ಥಗಿತಗೊಂಡು ಸಾಮಾಜಿಕ ನ್ಯಾಯ ಮರೀಚಿಕೆಯಾಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೆ ಸಂಸ್ಥೆಯನ್ನು ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸಿದರು

ಬೆಮೆಲ್ ಲಾಭದಾಯಕವಾಗಿ ನಡೆಯುತ್ತಿದ್ದು, ಕೇಂದ್ರ ಸರ್ಕಾರಕ್ಕೆ ತೆರಿಗೆ ಹಾಗೂ ಲಾಭಾಂಶ ರೂಪದಲ್ಲಿ ಸಾವಿರಾರು ಕೋಟಿ ರೂ.ಗಳನ್ನು ನೀಡುವ ಜತೆಗೆ ಷೇರುದಾರರಿಗೆ ಪ್ರತಿವರ್ಷ ಡಿವಿಡೆಂಡ್ ಪಾವತಿ ಸುತ್ತಾ ದೇಶದ ಪ್ರಗತಿಗೆ ಕೊಡುಗೆ ನೀಡುತ್ತಿದೆ. ಸದ್ಯ ಬೆಮೆಲ್ ಸಂಸ್ಥೆಯಲ್ಲಿ ಕೇಂದ್ರ ಸರ್ಕಾರವು ಶೇ.54.03ರಷ್ಟು ಷೇರು ಬಂಡವಾಳ ಹೊಂದಿದ್ದು, 2016ರ ನವೆಂಬರ್‍ನಲ್ಲಿ ಕೇಂದ್ರ ಸಚಿವ ಸಂಪುಟದ ಅನುಮೋದನೆ ಮೇರೆಗೆ ಶೇ.26ರಷ್ಟು ಷೇರನ್ನು ಖಾಸಗಿಯವರಿಗೆ ಮಾರಾಟ ಮಾಡುವ ಪ್ರಕ್ರಿಯೆ ಆರಂಭಿಸಿ, ಅದರ ಮುಂದುವರೆದ ಭಾಗವಾಗಿ ಸಂಸ್ಥೆಯ ಆಡಳಿತ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸುತ್ತಾ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಬೆಮಲ್ ನಿವೃತ್ತ ಕಾರ್ಮಿಕ ಜಿ.ಅರ್ಜುನನ್, ಬೆಮೆಲ್ ಸಂಸ್ಥೆಯು 1964ರಲ್ಲಿ ರೈಲು ಕೋಚ್‍ಗಳ ಉತ್ಪಾದನೆ ಹಾಗೂ ಬಿಡಿಭಾಗಗಳ ಪೂರೈಕೆಗಾಗಿ ಬೆಂಗಳೂರಿನಲ್ಲಿ ಸ್ಥಾಪನೆ ಗೊಂಡಿತು. ನಂತರ ಕೆಜಿಎಫ್, ಮೈಸೂರು ಹಾಗೂ ಪಾಲಕ್ಕಾಡ್‍ನಲ್ಲಿ ಉತ್ಪಾದನಾ ಘಟಕಗಳನ್ನು ವಿಸ್ತರಿಸುವ ಜತೆಗೆ ರಕ್ಷಣೆ, ರೈಲು, ಮೆಟ್ರೋ, ಗಣಿಗಾರಿಕೆ ಮತ್ತು ಮೂಲ ಸೌಕರ್ಯ ಹಾಗೂ ಏರೋಸ್ಪೇಸ್ ವಲಯ ಗಳಿಗೆ ಅಗತ್ಯವಾದ ಯಂತ್ರ ಮತ್ತು ವಾಹನಗಳನ್ನು ಉತ್ಪಾದಿಸುತ್ತಿದೆ. ದೇಶಾದ್ಯಂತ ಮಾರಾಟ ಜಾಲ ಹೊಂದಿ ಉತ್ಕøಷ್ಟ ಸೇವೆ ನೀಡುತ್ತಿರುವ ಸಂಸ್ಥೆಯನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡಲು ಮುಂದಾಗಿದ್ದು ಈ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿದರು.

ಕೆಜಿಎಫ್ ನಗರದ ಬೆಮೆಲ್ ಮುಂಭಾಗದಿಂದ ಬೆಳಗ್ಗೆ ಬೈಕ್ ರ್ಯಾಲಿ ಹೊರಟ ನಿವೃತ್ತ ಕಾರ್ಮಿಕರು ಬೆಮೆಲ್ ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾgದ ವಿರುದ್ದ ಘೋಷಣೆ ಕೂಗಿ ಸಾರ್ವಜನಿಕ ಉದ್ದಿಮೆಯನ್ನು ಉಳಿಸುವಂತೆ ಒತ್ತಾಯಿಸುತ್ತಾ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ ವ್ಯಕ್ತಪಡಿಸಿದರು.

ಜಿಲ್ಲೆಯ ಸಾರ್ವಜನಿಕ ಉದ್ದಿಮೆ ಬೆಮಲ್ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಬೆಮಲ್ ನಿವೃತ್ತ ನೌಕರರು ಕೆಜಿಎಫ್ ನಗರದಿಂದ ಜಿಲ್ಲಾಧಿಕಾರಿ ಕಚೇರಿಯವರಗೆ ಶುಕ್ರವಾರ ಬೈಕ್ ರ್ಯಾಲಿ ನಡೆಸಿ ಪ್ರತಿಭಟಿಸಿದರು.

ವಿಜಯವಾಣಿ ಸುದ್ದಿಜಾಲ ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net