ಬೆನ್ನುಮೂಳೆ ಶಸಚಿಕಿತ್ಸೆ ಕಾರ್ಯಾಗಾರ ಯಶಸ್ವಿ

08rajesh2
Published on

ಚಾಮರಾಜನಗರ: ಬೆನ್ನುಮೂಳೆಯ ಒಂದು ಭಾಗ ತನ್ನ ಸ್ಥಾನದಿಂದ ಸರಿದು, ನರದ ಮೇಲೆ ಅಪಾರವಾದ ಒತ್ತಡವನ್ನು ಉಂಟುಮಾಡಿತ್ತು. ಇದೇ ಮೊದಲ ಬಾರಿಗೆ ಎಂಡೋಸ್ಕೋಪಿ ಮೂಲಕ 3 ರೋಗಿಗಳಿಗೆ ಸುಲಭ ವಿಧಾನದಲ್ಲಿ ಮಾಡಿದ ಶಸಚಿಕಿತ್ಸೆ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.

ನಗರದ ಹೊರವಲಯದಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧನಾ ಆಸ್ಪತ್ರೆ, ಕರ್ನಾಟಕ ಮೆಡಿಕಲ್ ಕೌನ್ಸಿಲ್, ರಾಜೀವ್ ಗಾಂಧಿ ಮೂನಿವರ್ಸಿಟಿ, ಬೆಂಗಳೂರು ಆಥೋಪೆಡಿಕ್ ಸೊಸೈಟಿ, ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ ಟ್ರಸ್ಟ್, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಸಿಮ್ಸ್ ಟೀಚರ್ಸ್ ಅಸೋಸಿಯೇಷನ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಟ್ರಾನ್ಸ್‌ಪೋರೋಮಿನಲ್ ಆ್ಯಂಡ್ ಇಂಟರ್ ಲ್ಯಾಮಿನರ್ ಎಂಡೋಸ್ಕೋಪಿ ಶಸಚಿಕಿತ್ಸಾ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.

ಸಿಮ್ಸ್ ಆಸ್ಪತ್ರೆಯ ಸಭಾಂಗಣದಲ್ಲಿ ಬೆಳಿಗ್ಗೆ 8 ಗಂಟೆಗೆ ಎಂಡೋಸ್ಕೋಪಿ ಮೂಲಕ ಬೆನ್ನುಮೂಳೆ ಶಸ ಚಿಕಿತ್ಸೆ ನಡೆಸುವಲ್ಲಿ ನುರಿತ ತಜ್ಞರಾದ ಡಾ.ಕೀರ್ತಿವಾಸನ್, ಡಾ.ಮೃತ್ಯುಂಜಯ, ಡಾ.ರವಿಕುಮಾರ್, ಡಾ.ರವೀಂದ್ರನಾಥ್, ಹಾಗೂ ಡಾ.ಮಹೇಶ್ ಅವರು ಎಂಡೋಸ್ಕೋಪಿ ಮೂಲಕ ಬೆನ್ನುಮೂಳೆ ಶಸಚಿಕಿತ್ಸೆ ಸಂಬಂಧ ವಿವಿಧ ವಿಷಯಗಳ ಕುರಿತು ಮಧ್ಯಾಹ್ನದ ವರೆಗೂ ಸೆಮಿನಾರ್ ನಡೆಸಿಕೊಟ್ಟರು.

ಬಳಿಕ ಮಂಗಳೂರಿನ ಡಾ.ಮಹೇಶ್ ಅವರು ಓರ್ವ ರೋಗಿಗೆ ಎಂಡೋಸ್ಕೋಪಿ ಮೂಲಕ ಬೆನ್ನುಮೂಳೆ ಶಸಚಿಕಿತ್ಸೆ ಮಾಡಿದರು. ಕೇವಲ 30 ನಿಮಿಷಕ್ಕೆ ಮುಕ್ತಾಯವಾದ ಶಸ ಚಿಕಿತ್ಸೆಯ ಪ್ರಾತ್ಯಕ್ಷಿಕೆಯನ್ನು ಸಭಾಂಗಣದಲ್ಲಿ ಅಳವಡಿಸಿದ್ದ ದೊಡ್ಡ ಪರದೆಯಲ್ಲಿ ಪ್ರದರ್ಶನ ಮಾಡಲಾಯಿತು. ಈ ವೇಳೆ ಶಸಚಿಕಿತ್ಸೆಯ ಸಂದರ್ಭದಲ್ಲಿ ಅನುಸರಿಸಬೇಕಾದ ಕಾರ್ಯವಿಧಾನಗಳ ಬಗ್ಗೆ ವೈದ್ಯರು ವಿವರಿಸಿದರು. ಮಧ್ಯಾಹ್ನದ ಬಳಿಕ ಮತ್ತಿಬ್ಬರು ರೋಗಿಗಳಿಗೆ ಎಂಡೋಸ್ಕೋಪಿ ವಿಧಾನದಲ್ಲಿ ಶಸಚಿಕಿತ್ಸೆ ಮಾಡಲಾಯಿತು. ಇದೇ ಮೊದಲ ಬಾರಿಗೆ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ನಡೆದ ಎಂಡೋಸ್ಕೋಪಿ ಮೂಲಕ ಪ್ರೊಲ್ಯಾಪ್ಸ್ ಡಿಸ್ಕ್ ಕಾರ್ಯಾಗಾರಕ್ಕೆ ವಿವಿಧ ಕಡೆಗಳಲ್ಲಿ ಆಗಮಿಸಿದ್ದ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಂದ ಮೆಚ್ಚುಗೆ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ಸಿಮ್ಸ್ ನರ್ಸಿಂಗ್ ಕಾಲೇಜು ಪ್ರಾಂಶುಪಾಲ ಡಾ.ಗಿರೀಶ್ ಪಟೇಲ್, ಡಾ.ಪದ್ಮಾಕ್ಷ, ಡಾ.ಎಚ್.ಬಿ.ಶೋಭಾ, ಮೈಸೂರು ಮೆಡಿಕಲ್ ಅಸೋಸಿಯೇಷನ್ ಕಾರ್ಯದರ್ಶಿ ಡಾ.ಸುಜನ್ ತೇಜಾ, ಡಾ.ಪುರುಷೋತ್ತಮ್, ಡಾ.ಮಲ್ಲಿಕಾರ್ಜುನಸ್ವಾಮಿ, ಡಾ.ಮುತ್ತಪ್ಪ, ಸ್ಥಾನಿಕ ವೈದ್ಯಾಧಿಕಾರಿ ಡಾ.ಮಹೇಶ್, ಡಾ.ರಾಘವೇಂದ್ರ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net