ಬೆನ್ನು ನೋವಿಗೆ ಹೆದರಿ ಆತ್ಮಹತ್ಯೆ

Published on

ಮೈಸೂರು: ಬೆನ್ನು ನೋವಿನ ಚಿಕಿತ್ಸೆಗೆ ಹೆದರಿದ ಗೃಹಿಣಿ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಾಯ್ದುನಗರದ ಕವಿತಾ (48) ಆತ್ಮಹತ್ಯೆ ಮಾಡಿಕೊಂಡವರು. ಕೋವಿಡ್ ಸಮಯದಲ್ಲಿ ಪತಿ ಶಿವಲಿಂಗೇಗೌಡ ಅವರನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಸಿಲುಕಿದ್ದಲ್ಲದೇ ಕವಿತಾ ಅವರಿಗೆ ತೀವ್ರ ತರದ ಬೆನ್ನುಬೋವು ಕೂಡಾ ಬಾದಿಸುತ್ತಿತ್ತು. ಇದಕ್ಕೆ ಶಸ್ತ್ರ ಚಿಕಿತ್ಸೆ ನಡೆಸಬೇಕು ಎಂದು ವೈದ್ಯರು ನಿರ್ಧರಿಸಿದ್ದರು. ಆದರೆ ಶಸ್ತ್ರ ಚಿಕಿತ್ಸೆಗೆ ಹೆದರಿ ಶುಕ್ರವಾರ ರಾತ್ರಿ ಎಲ್ಲರೂ ಮಲಗಿದ್ದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net