ಬೆನ್ನಿಗೆ ಅಲಗು ಚುಚ್ಚಿಸಿಕೊಂಡು ಪರಾಕಾಷ್ಠೆ ಮೆರೆದ ಭಕ್ತರು

7 HPT 2
Published on

ಹೊಸಪೇಟೆ: ತಾಲೂಕಿನ ಕಡ್ಡಿರಾಂಪುರ ಗ್ರಾಮದಲ್ಲಿ ಮಂಗಳವಾರ ಭದ್ರಕಾಳಿದೇವಿಯ ಜಾತ್ರಾ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.


ಜಾತ್ರೆಯ ನಿಮಿತ್ತ ಭಕ್ತರು ಬೆನ್ನಿಗೆ ಅಲಗು ಚುಚ್ಚಿಸಿಕೊಂಡು ಕ್ರೇನ್‌ನಲ್ಲಿ ತೂಗುತ್ತಾ ಮೆರವಣಿಗೆಯಲ್ಲಿ ಸಾಗುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು. ಕೆಲವರು ಮಡಿಸ್ನಾನ ಮಾಡಿ ಅಗ್ನಿಕುಂಡ ಪ್ರವೇಶಿಸುವ ಹರಿಕೆ ತೀರಿಸಿದರು.


ಜಾತ್ರೆ ನಿಮಿತ್ತ ಬೆಳಗ್ಗೆಯಿಂದಲೇ ದೇವಿಯ ಸನ್ನಿಧಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಇದಕ್ಕೂ ಮುನ್ನ ಗಂಗಾ ಪೂಜೆಗಾಗಿ ಕಡ್ಡಿರಾಂಪುರದಿಂದ ಹಂಪಿ ಮಾರ್ಗದಲ್ಲಿರುವ ಕೆನಾಲ್ ವರೆಗೆ ಕುಂಭ ಮೆರವಣಿಗೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net