

ಮೈಸೂರು: ಮಣಿಪುರದಲ್ಲಿ ಇಬ್ಬರು ಹೆಣ್ಣುಮಕ್ಕಳ ಬೆತ್ತಲೆ ಮೆರವಣಿಗೆ ಘಟನೆ ಖಂಡಿಸಿ ಅಶೋಕಪುರಂ ನಾಗರಿಕರ ಸಮಾಜದ ವತಿಯಿಂದ ಭಾನುವಾರ ಸಂಜೆ ಪಂಜಿನ ಮೆರವಣಿಗೆ ಮೂಲಕ ಮೌನ ಪ್ರತಿಭಟನೆ ನಡೆಸಿದರು.
ಜಿಟಿ ಜಿಟಿ ಮಳೆಯ ನಡುವೆಯೂ ಅಶೋಕಪುರಂನ ಅಂಬೇಡ್ಕರ್ ಉದ್ಯಾನದಿಂದ ಮೆರವಣಿಗೆ ನಡೆಸಿ ಪ್ರತಿಭಟನಾಕಾರರು, ಬಲ್ಲಾಳ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಮೇಯರ್ ಪುರುಷೋತ್ತಮ್, ಮುಖಂಡ ಜಯಶಂಕರ್ ಸೇರಿದಂತೆ ಇನ್ನಿತರರು ಇದ್ದರು.