ಬೆಣ್ಣೂರ ಗ್ರಾಮಕ್ಕೆ ಸೌಲಭ್ಯ ಕಲ್ಪಿಸಿ

oppo_2
oppo_2
Published on

ಕಲಬುರಗಿ: ಚಿತ್ತಾಪುರ ವಿಧಾನಸಭೆ ಕ್ಷೇತ್ರದ, ಕಾಳಗಿ ತಾಲೂಕಿನ ಬೆಣ್ಣೂರ ಕೆ, ಕಣಸೂರ, ಮಲಘಾಣ ಗ್ರಾಮಗಳಿಗೆ ಹೊಸ ಪಂಚಾಯಿತಿ ಮಂಜೂರು ಮಾಡಬೇಕು, ಬೆಣ್ಣೂರು (ಕೆ) ಅಶೋಕ ನಗರ ಗ್ರಾಮಕ್ಕೆ ಸೌಕರ್ಯಗಳನ್ನು ಒದಗಿಸಬೇಕು ಎಂದು ಗ್ರಾಪಂ ಸದಸ್ಯ ರಾಕೇಶ ಕಟ್ಟಿಮನಿ ಆಗ್ರಹಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು, ಸಿಬ್ಬಂದಿ ಒದಗಿಸಿ ಆರಂಭ ಮಾಡಬೇಕು. ಅಶೋಕ ನಗರಕ್ಕೆ ನ್ಯಾಯ ಬೆಲೆ ಅಂಗಡಿ ಮಂಜೂರು ಮಾಡಬೇಕು, ಮಹಿಳೆಯರಿಗೆ ಸಾಮೂಹಿಕ ಶೌಚಗೃಹ ನಿರ್ಮಿಸಬೇಕು ಎಂದು ಗುರುವಾರ ಸುದ್ದಿಗೋಷಿಯಲ್ಲಿ ಆಗ್ರಹಿಸಿದರು.

ಅಶೋಕ ನಗರಕ್ಕೆ ಎಲ್ಲ ಸಮುದಾಯದವರಿಗೆ ಅನುಕೂಲಕ್ಕಾಗಿ ರುದ್ರಭೂಮಿ ಮಂಜೂರಿ ಮಾಡಿ, ಸ್ಥಳಾವಕಾಶ ಕಲ್ಪಿಸಬೇಕು, ಕಂದಾಯ ಇಲಾಖೆಯ ದಾಖಲೆಯಲ್ಲಿ ಬೆಣ್ಣೂರ (ಕೆ) ಮಾತ್ರ ನಮೂದು ಬರುತ್ತಿದ್ದು, ಅದರ ಜತೆಗೆ ಅಶೋಕ ನಗರ ಎಂದು ನಮೂದಿಸಿ, ಆಡಳಿತ ಶಾಖೆಯಲ್ಲಿ ತುರ್ತು ಚಲಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಕೃಷ್ಣಾ ಕಟ್ಟಿಮನಿ, ಮಹಾದೇವಪ್ಪ, ವಿಠುಬಾಯಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net