ಬೆಡಸೂರಲ್ಲಿ ಹದಗೆಟ್ಟ ರಸ್ತೆ

0107Klb08
Published on

ಕಾಳಗಿ: ಬೆಡಸೂರ ಗ್ರಾಮದಲ್ಲಿನ ಸಮಗಂಗಾ ದೇವಿ ದೇವಸ್ಥಾನ ಎದುರಿನ ಮುಖ್ಯ ರಸ್ತೆಯೂ ಸಂಪರ‍್ಣ ಹದಗೆಟ್ಟಿದ್ದು, ಸರ‍್ವಜನಿಕರು ಸಂಚಾರಕ್ಕೆ ತೀವ್ರ ಸಂಕಷ್ಟ ಎದುರಾಗಿದೆ. ತಗ್ಗು ಗುಂಡಿಗಳು ಬಿದ್ದು, ಜನರ ಓಡಾಟವೂ ಕಷ್ಟವಾಗಿದ್ದು, ದ್ವಿಚಕ್ರ ವಾಹನಗಳು ನಿತ್ಯ ಅಪಘಾತಕ್ಕೆ ಈಡಾಗುತ್ತಿವೆ.

ಮಳೆಗಾಲ ಬಂದರಂತೂ ನೀರು ನಿಂತು ರಸ್ತೆಯು ಕೆಸರುಮಯವಾಗಿದ್ದು, ವೃದ್ಧರು, ಮಕ್ಕಳು ಓಡಾಡಲೂ ಆಗುತ್ತಿಲ್ಲ. ರಸ್ತೆ ಚರಂಡಿಯಂತಾಗಿದ್ದು, ಹೊಲಸು ನೀರು ನಿಂತು ಸೊಳ್ಳೆ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗ ಹೆಚ್ಚುವ ಭೀತಿ ಎದುರಾಗಿದೆ. ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ್​ ಅವರ ಸ್ವಗ್ರಾಮವಾಗಿರುವ ಬೆಡಸೂರದಲ್ಲೇ ಸಮಸ್ಯೆ ಇದ್ದು, ತಕ್ಷಣ ಸ್ಪಂದಿಸಬೇಕು ಎಂದು ಗ್ರಾಮಸ್ಥರು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net