ಬೆಟ್ಟಳ್ಳಿ ಅರಣ್ಯ ಪ್ರದೇಶದಲ್ಲಿ ಚಿರತೆ ಕಳೇಬರ ಪತ್ತೆ

18
Published on

ಕೆ.ಆರ್.ನಗರ: ತಾಲೂಕಿನ ಬೆಟ್ಟಳ್ಳಿ ಅರಣ್ಯ ಪ್ರದೇಶದಲ್ಲಿ ಚಿರತೆ ಕಳೇಬರ ಪತ್ತೆಯಾಗಿದೆ. ಸ್ಥಳಕ್ಕೆ ಹುಣಸೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ತಂಡ ಆಗಮಿಸಿ ಪರಿಶೀಲನೆ ನಡೆಸಿತು.


ಎರಡು ಚಿರತೆಗಳ ಕಾದಾಟದಲ್ಲಿ ಗಾಯಗೊಂಡು ಚಿರತೆ ಮೃತಪಟ್ಟಿದೆ. ಸಾಲಿಗ್ರಾಮ ಪಶು ವೈದ್ಯಾಧಿಕಾರಿಯಿಂದ ಮರಣೋತ್ತರ ಪರೀಕ್ಷೆ ನಡೆಸಿ ನಿಯಮಾನುಸಾರ ಶವಸಂಸ್ಕಾರ ಮಾಡಲಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಾರುತಿ ಮಾಹಿತಿ ನೀಡಿದ್ದಾರೆ.


ಕೆ.ಆರ್.ವಲಯ ಅರಣ್ಯಾಧಿಕಾರಿ ಎಂ.ಆರ್.ರಶ್ಮಿ, ಉಪವಲಯ ಅರಣ್ಯಾಧಿಕಾರಿ ಕುಮಾರ್, ಗಸ್ತು ಅರಣ್ಯಪಾಲಕರಾದ ಕುಮಾರ್‌ನಾಯಕ್, ಸ್ವಾಮಿ, ಚಿರತೆ ಕಾರ್ಯಪಡೆಯ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net