

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು ಸಹಿತ ಜೋರು ಮಳೆ ಸುರಿಯಿತು.
ಬೆಟ್ಟದಪುರ, ಈಚೂರು, ಕೂರಗಲ್ಲು, ಜೋಗನಹಳ್ಳಿ, ಭುವನಹಳ್ಳಿ, ಬೆಟ್ಟದತುಂಗ, ಗೊರಹಳ್ಳಿ, ಚಿಕ್ಕನೇರಳೆ, ಹಾರನಹಳ್ಳಿ, ಚಪ್ಪರದಹಳ್ಳಿ, ವಡ್ಡರಬೈಲಕುಪ್ಪೆ, ಸುರಗಳ್ಳಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಗುಡುಗು ಸಹಿತ ಸುರಿದ ಜೋರು ಮಳೆ ಬೇಸಿಗೆಯ ಬಿಸಿಲಿನಿಂದ ಕಾದ ಭೂಮಿಯನ್ನು ತಂಪೆರುದು, ರೈತರ ಮೊಗದಲ್ಲಿ ಹರ್ಷ ತಂದಿತು.