ಕುಣಿಗಲ್: ಶ್ರೀ ಬೆಟ್ಟದ ರಂಗನಾಥಸ್ವಾಮಿ ದೇವಾಲಯದ ಹಿಂಭಾಗದ ಗೊಡೆ ಕೊರೆದು ಒಳ ನುಗ್ಗಿದ್ದ ಕಳ್ಳರು 3 ಹುಂಡಿಗಳಲ್ಲಿದ್ದ ಹಣ ದೋಚಿದ್ದಾರೆ.
ಬೆಟ್ಟದ ರಂಗನಾಥಸ್ವಾಮಿ ದೇವಾಲಯಕ್ಕೆ ಬಾಗಿಲು ಇಲ್ಲದ ಕಾರಣ ದೇವಾಲಯದ ಆಡಳಿತ ಮಂಡಳಿ ದೇವಾಲಯದ ಪಕ್ಕದಲ್ಲಿ ಪ್ರತ್ಯೇಕವಾಗಿ ರೂಂ ಕಟ್ಟಿ, ಆ ರೂಂನಲ್ಲಿ ಭಕ್ತರು ಹಾಕುವ ಕಾಣಿಕೆ ಹಣದ ಹುಂಡಿ ಇಡುತ್ತಿದ್ದರು. ಇದನ್ನು ಗಮನಿಸಿದ್ದ ಕಳ್ಳರು ರೂಂನ ಹಿಂಭಾಗದ ಗೋಡೆ ಕೊರೆದು ಹುಂಡಿ ಹಣ ದೋಚಿ ಹುಂಡಿಗಳನ್ನು ದೇವಾಲಯದ ಸಮೀಪದ ಅರಣ್ಯದಲ್ಲಿ ಎಸೆದಿದ್ದಾರೆ. ದೇವಾಲಯದ ಕಾರ್ಯ ನಿರ್ವಾಣಾಧಿಕಾರಿ ಮಹೇಶ್ 25 ಸಾವಿರ ರೂ.ಹಣ ಕಳವಾಗಿದೆ ಎಂದು ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಂಡ, ಡಾಗ್ ಸ್ಕ್ವಾಡ್ ಭೇಟಿ ನೀಡಿ ಪರಿಶೀಲನೆ ನಡೆಸಿದೆ.