

ಗದಗ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಟಗೇರಿ ಘಟಕದಿಂದ ಜಿಲ್ಲಾ ಆಸ್ಪತ್ರೆಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಗುರುವಾರ ಬಸ್ ಸಂಚಾರ ಸೇವೆ ಆರಂಭಿಸಲಾಯಿತು. ಜಿಲ್ಲಾಸ್ಪತ್ರೆ ಆವರಣದಲ್ಲಿ ನೂತನ ಬಸ್ ಸಂಚಾರಕ್ಕೆ ಜಿಲ್ಲಾಧಿಕಾರಿ ಸುಂದರೇಶಬಾಬು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಪ್ರತಿದಿನ ಬೆಟಗೇರಿ ಘಟಕದಿಂದ ಎರಡು ಬಸ್ಗಳು ಸಂಚಾರ ಮಾಡಲಿದ್ದು, ಮಾರ್ಗದ ವಿವರ ಇಂತಿದೆ. ಬೆಟಗೇರಿ ಘಟಕದಿಂದ ಜರ್ಮನ್ ಆಸ್ಪತ್ರೆ, ಹಳೇ ಬಸ್ನಿಲ್ದಾಣ, ಹೊಸ ಬಸ್ ನಿಲ್ದಾಣ, ಹಳೇ ಜಿಲ್ಲಾಧಿಕಾರಿ ಕಚೇರಿ, ಮುಳಗುಂದ ನಾಕಾ, ಸಿದ್ದಲಿಂಗನಗರ, ರಾಧಕೃಷ್ಣ ನಗರ, ಅಂಜುಮನ್ ಕಾಲೇಜ್ ಮಾರ್ಗವಾಗಿ ಜಿಲ್ಲಾ ಆಸ್ಪತ್ರೆಗೆ ಬಸ್ ತಲುಪಲಿದೆ.
ಬಸ್ ಸಂಚಾರ ಸಮಯ: ಬೆಟಗೇರಿಯಿಂದ ಜಿಲ್ಲಾ ಆಸ್ಪತ್ರೆಗೆ ಬೆಳಗ್ಗೆ 7:30, 8:00, 9:10, 9:40, 10:50, 11:20, 12:40, 1:00, 2:40, 3:00, 4:30, 4:45 ಗಂಟೆಗೆ ಹಾಗೂ ಜಿಲ್ಲಾ ಆಸ್ಪತ್ರೆಯಿಂದ ಬೆಟಗೇರಿಗೆ ಬೆಳಗ್ಗೆ 8:20, 8:50, 10:00, 10:30, 11:40, 12:10, 1:30, 2:10, 3:30, 4:00, 5:30, 6 ಗಂಟೆಗೆ ಬಸ್ ಸಂಚರಿಸಲಿವೆ.
ಕಾರ್ಯಕ್ರಮದಲ್ಲಿ ವಾಕರಸಾ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾಕಾರಿ ಎಫ್.ಸಿ. ಹಿರೇಮಠ, ಘಟಕ ವ್ಯವಸ್ಥಾಪಕ ಎಚ್.ಟಿ. ಬಳೂಟಗಿ, ಜಿಮ್್ಸ ನಿರ್ದೇಶಕ ಡಾ. ಭೂಸರೆಡ್ಡಿ ಸೇರಿದಂತೆ ಮತ್ತಿತರರು ಇದ್ದರು.