ಬೆಂಬಲಿಗರ ವಿಜಯೋತ್ಸವ

16CKD1
Published on

ಚಿಕ್ಕೋಡಿ: ತಾಲೂಕಿನ ಬೆಳಕೂಡ ಗ್ರಾಮದಲ್ಲಿ ಭಾನುವಾರ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಚಿಕ್ಕೋಡಿ ವಕೀಲ ಸಂಘದ ಅಧ್ಯಕ್ಷ ಕಲ್ಮೇಶ ತುಕಾರಾಮ ಕಿವಡ ನೇತೃತ್ವದ ಪೆನಲ್ ಜಯಗಳಿಸಿದೆ.

ಸಾಲಗಾರರ ಸಾಮಾನ್ಯ ಕ್ಷೇತ್ರದಲ್ಲಿ ಕಲ್ಮೇಶ ತುಕಾರಾಮ ಕಿವಡ, ಬಸವಣ್ಣಿ ಶಂಕರ ಪಾಶ್ಚಾಪೂರೆ, ರಾಜೇಂದ್ರ ಪಾಶ್ಚಾಪೂರೆ, ವಿರೂಪಾಕ್ಷಿ ಶಿವಪೂಜೆ, ರಾಮಪ್ಪ ಸಂಗೋಟೆ, ಅ ವರ್ಗದಲ್ಲಿ ಮಹಾದೇವ ಪಾಮದಿನ್ನಿ, ಬಿನ್ ಸಾಲಗಾರ ವಿಭಾಗದಲ್ಲಿ ಪ್ರಭಾಕರ ಡಬ್ಬನ್ನವರ, ಮಹಿಳಾ ವಿಭಾಗದಿಂದ ಸಾವಿತ್ರಿ ಮುತ್ನಾಳಿ, ಸಾಲಗಾರರ ಮಹಿಳಾ ವಿಭಾಗದಿಂದ ಹೌಸಾಬಾಯಿ ಸೊಲ್ಲಾಪುರೆ, ಸಾಲಗಾರರ ಬ ವರ್ಗದಿಂದ ದುರದುಂಡಿ ವಿರೂಪಾಕ್ಷಿ ಕೇಸ್ತಿ, ಪರಿಶಿಷ್ಟ ವಿಭಾಗದಿಂದ ಬಸವಣ್ಣಿ ಎಂಟೆತ್ತಿನವರ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net