ಬೆಂಬಲಿಗನ ಆಸ್ಪತ್ರೆ ಬಿಲ್ ತುಂಬಿದ ಸತೀಶ ಸೈಲ್

21KWR1
Published on

ಕಾರವಾರ: ಅನಾರೋಗ್ಯದಿಂದ ಮೃತಪಟ್ಟ ತಮ್ಮ ಬೆಂಬಲಿಗನ ಆಸ್ಪತ್ರೆ ವೆಚ್ಚ 2.25 ಲಕ್ಷ ರೂ.ಗಳನ್ನು ಮಾಜಿ ಶಾಸಕ ಸತೀಶ ಸೈಲ್ ಪಾವತಿಸಿದ್ದಾರೆ. ತಾಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ ನಾಯ್ಕ ಅನಾರೋಗ್ಯಕ್ಕೊಳಗಾಗಿ ಮಂಗಳೂರಿನ ಖ್ಯಾತ ಎ.ಜೆ. ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದರು. ಆಸ್ಪತ್ರೆಯ ಬಿಲ್ 3.90 ಲಕ್ಷ ರೂಪಾಯಿ ಆಗಿತ್ತು. ಇದನ್ನು ತುಂಬಲು ಕುಟುಂಬ ಸದಸ್ಯರಿಗೆ ಕಷ್ಟವಾಗಿತ್ತು. ಹೀಗಾಗಿ, ಮಾಜಿ ಶಾಸಕ ಸತೀಶ ಸೈಲ್ ಅವರು ಕಾರವಾರಕ್ಕೆ ಆಗಮಿಸಿದ್ದ ಆಸ್ಪತ್ರೆ ಅಧಿಕಾರಿ ಶಿವಪ್ರಸಾದ ಅವರೊಂದಿಗೆ ರ್ಚಚಿಸಿ 3.90 ಲಕ್ಷ ರೂ. ಇದ್ದ ಮೊತ್ತದಲ್ಲಿ 2.25 ಲಕ್ಷ ರೂ.ಗಳನ್ನು ಪಾವತಿಸಿದರು. ಇನ್ನುಳಿದ 75 ಸಾವಿರ ರೂ. ಮೊತ್ತವನ್ನು ರಿಯಾಯಿತಿ ಮಾಡಿಸಿದರು. ಪ್ರಭಾಕರ ಮಾಳ್ಸೇಕರ್, ಅನಿಲ ನಾಯ್ಕ, ಮೋಹನ ನಾಯ್ಕ, ಸಮೀರ ನಾಯ್ಕ ಶಂಭು ಶೆಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net