ಬೆಂಬಲ ಬೆಲೆಯಲ್ಲಿ ಹೆಸರು ಕಾಳು ಖರೀದಿ

ctd--0000006
Published on

ಚಿತ್ರದುರ್ಗ: ಕರ್ನಾಟಕ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಹೆಸರು ಕಾಳು ಖರೀದಿಸಲಾಗುತ್ತದೆ. ಪ್ರೂಟ್ಸ್ ಐಡಿಯೊಂದಿಗೆ ರೈತರು ಹೆಸರು ಕಾಳು ಮಾರಾಟಕ್ಕೆ ನೋಂದಣಿ ಮಾಡಿಕೊಳ್ಳಬೇಕು ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಕೋರಿದೆ.
ಮಂಡಳದ ಚಿತ್ರದುರ್ಗ ಶಾಖೆಯಿಂದ ಹೊಸದುರ್ಗ ತಾಲೂಕಿನಲ್ಲಿ ಪಿಎಸಿಎಸ್ ಹೊಸದುರ್ಗ ರಸ್ತೆ ಮತ್ತು ಪಿಎಸಿಎಸ್ ಶ್ರೀರಾಂಪುರ ಹಾಗೂ ಹಿರಿಯೂರು ತಾಲೂಕಿನ ಪಿಎಸಿಎಸ್ ಐಮಂಗಲ ಮತ್ತು ಪಿಎಸಿಎಸ್ ಬಬ್ಬೂರು ಸಹಕಾರ ಸಂಘದಲ್ಲಿ ನೋಂದಣಿಗೆ ಅವಕಾಶವಿದೆ. ಪ್ರತಿ ರೈತರಿಂದ ಪ್ರತಿ ಎಕರೆಗೆ 2 ಕ್ವಿಂಟಾಲ್‌ನಂತೆ ಗರಿಷ್ಟ 10 ಕ್ವಿಂಟಾಲ್ ಹೆಸರು ಕಾಳು ಖರೀದಿ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ 9008558668/ 9844820821ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net