ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ

march 4 kottur 02
Published on

ಕೊಟ್ಟೂರು: ಪಟ್ಟಣದ ಎಪಿಎಂಸಿ ಆವರಣದಲ್ಲಿ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ದಾರುಕೇಶ ಮಂಗಳವಾರ ಸಾಂಕೇತಿಕವಾಗಿ ಚಾಲನೆ ನೀಡಿದರು.

ಖರೀದಿ ಕೇಂದ್ರದ ಅಧಿಕಾರಿ ಜಿ. ಕೊಟ್ರೇಶ ಮಾತನಾಡಿ, ಖರೀದಿ ಕೇಂದ್ರದಲ್ಲಿ ಗೋಣಿಚೀಲಗಳ ದಾಸ್ತಾನು ಇಲ್ಲದ ಕಾರಣ ಬುಧವಾರ ಮತ್ತು ಗುರುವಾರ ಗೋಣಿಚೀಲ ಸರಬರಾಜು ಆಗುವ ನಿರೀಕ್ಷೆ ಇದೆ. ಆ ಬಳಿಕ ಖರೀದಿ ನಿರಂತರವಾಗಿ ನಡೆಯಲಿದೆ. ಸರ್ಕಾರ ಒಂದು ಕ್ವಿಂಟಾಲ್ ರಾಗಿಗೆ 4,290 ರೂ. ನಿಗದಿ ಮಾಡಿದೆ. 2,199 ರೈತರು ಹೆಸರು ನೋಂದಾಯಿಸಿದ್ದು, 39,890 ಕ್ವಿಂಟಾಲ್ ರಾಗಿ ಖರೀದಿ ಕೇಂದ್ರಕ್ಕೆ ಬರಲಿದೆ. ರೈತರು ಹೆಸರು ನೋಂದಾಯಿಸಲು ಇನ್ನೂ ಆವಕಾಶವಿದೆ ಎಂದರು.

ಎಪಿಎಂಸಿ ಉಪಾಧ್ಯಕ್ಷ ಎಂ.ಶಿವಣ್ಣ, ನಿರ್ದೇಶಕ ಕೊಟ್ರೇಶ, ಕಾರ್ಯದರ್ಶಿ ಎ.ಕೆ.ವೀರಣ್ಣ, ವರ್ತಕರಾದ ಬಿ.ಎಸ್.ವೀರೇಶ, ಚಾಪಿ ಚಂದ್ರಪ್ಪ, ನಿವೃತ್ತ ಉಪನ್ಯಾಸಕ ನೂರುಲ್ಲಾ ನಾಯ್ಕ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net