ಬೆಂಡಿಗೇರಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

b
Published on

ಬೆಳಗಾವಿ:ಎನ್‌ಎಸ್‌ಎಸ್ ಮತ್ತು ಉನ್ನತ ಭಾರತ ಅಭಿಯಾನ ಈ ಸಂಸ್ಥೆಗಳ ಉದ್ದೇಶವೇ ಗ್ರಾಮಾಭಿವೃದ್ಧಿ ಮತ್ತು ಸಾಮಾಜಿಕ ಸೇವೆಯಾಗಿದೆ ಎಂದು ಲಿಂಗರಾಜ ಕಾಲೇಜಿ ಎನ್‌ಎಸ್‌ಎಸ್ ಸಂಯೋಜನಾಧಿಕಾರಿಗಳಾದ ಡಾ.ಎಚ್.ಎಮ್.ಚನ್ನಪ್ಪಗೋಳ ಹೇಳಿದರು.
ಭಾನುವಾರ ಬೆಂಡಿಗೇರಿಯಲ್ಲಿ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯ ಬೆಳಗಾವಿಯ ಉನ್ನತ ಭಾರತ ಅಭಿಯಾನ, ಎನ್.ಎಸ್.ಎಸ್. ಮತ್ತು ವಿದ್ಯಾಭಿವೃದ್ಧಿ ವಿದ್ಯಾರ್ಥಿಗಳ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಕೆ. ಎಲ್. ಸಂಸ್ಥೆಯ ಜೆ. ಎನ್. ಮೆಡಿಕಲ್ ಕಾಲೇಜಿನ ಸಹಯೋಗದಲ್ಲಿ ಬೆಂಡಿಗೇರಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಅಲ್ಲದೆ ಸರ್ಕಾರದ ಅನೇಕ ಯೋಜನೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಗುರುತರ ಜವಾಬ್ದಾರಿಯನ್ನು ಹೊಂದಿವೆ. ಅದರ ಭಾಗವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ಆರೋಗ್ಯ ತಪಾಸಣೆಗಳನ್ನು ಮಾಡುವುದು ಅಗತ್ಯವೆನಿಸಿದೆ ಎಂದರು. ಶಿಬಿರದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿವಾನಂದ ಚಂಡು, ಎ. ವಾಯ್. ಬೆಂಡಿಗೇರಿ, ಎಸ್ ಆರ್ ಮಾಳಾಯಿ, ರವಿ ಮೆಳೇದ, ಸಿದ್ದಣ್ಣ ಹಾವನ್ನವರ, ಸಂತೋಷ ಅಂಗಡಿ, ಬಸವರಾಜ ಡಮ್ಮನಗಿ, ವೀರೇಂದ್ರ ಮೇಳೇದ ಸೋಮಪ್ಪ ಶೀಗಿಹಳ್ಳಿ, ಮಲ್ಲಪ್ಪ ಕಾದ್ರೊಳ್ಳಿ ಇವರೆಲ್ಲರ ಉಪಸ್ಥಿತಿಯಲ್ಲಿ ಶಿಬಿರ ಯಶಸ್ವಿಯಾಗಿ ಜರುಗಿತು. ಸುಮಾರು 300ಕ್ಕೂ ಹೆಚ್ಚು ಜನರು ತಪಾಸಣೆ ಮಾಡಿಕೊಂಡರು. ಉನ್ನತ ಭಾರತ ಅಭಿಯಾನದ ಸಹ ಸಂಯೋಜಕರಾದ ಡಾ. ಸಿ. ಮಲ್ಲಣ್ಣ ಹಾಗೂ 50ಕ್ಕೂ ಹೆಚ್ಚು ಎನ್‌ಎಸ್‌ಎಸ್ ಸ್ವಯಂ ಸೇವಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net