ಬೆಂಗೇರಿಯಲ್ಲಿ ಆರೋಗ್ಯ ತಪಾಸಣೆ

VAK bengeri
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಸೇವಾ ಭಾರತಿ ಟ್ರಸ್ಟ್, ವೆಂಕಟೇಶ ಅಶೋಕ ಕಾಟವೆ (ವಿಎಕೆ) ಫೌಂಡೇಷನ್, ಶ್ರೀ ಮಾರುತಿ ಸ್ವ-ಸಹಾಯ ಯುವಕ ಸಂಘ ಹಾಗೂ ಬೆಂಗೇರಿ ಕೊಳಚೆ ಪ್ರದೇಶ ನಿಮೂಲನಾ ಸಮಿತಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ಶಿಬಿರದಲ್ಲಿ ಚಿಕ್ಕ ಮಕ್ಕಳ ತಜ್ಞರು, ಕ್ಯಾನ್ಸರ್, ಎಲುಬು-ಕೀಲು, ಸ್ತ್ರೀರೋಗ ತಜ್ಞರು ಮತ್ತು ದಂತ ವೈದ್ಯರು ಪಾಲ್ಗೊಂಡು ಅರೋಗ್ಯ ತಪಾಸಣೆ ನಡೆಸಿದರು.

ಬಿಪಿ ಮತ್ತು ಶುಗರ್ ಉಚಿತ ತಪಾಸಣೆ ಮಾಡಲಾಯಿತು ಮತ್ತು ಲಭ್ಯವಿರುವ ಔಷಧಿಗಳನ್ನು ನೀಡಲಾಯಿತು. ಬೆಂಗೇರಿ ಮತ್ತು ಸುತ್ತಮುತ್ತಲಿನ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡರು.

ಪಾಲಿಕೆ ಸದಸ್ಯ ಬೀರಪ್ಪ ಖಂಡೇಕರ, ಸಮಾಜ ಸೇವಕ ರಮೇಶ ಮಹಾದೇವಪ್ಪನವರ, ಹೂವಪ್ಪ ದಾಯಗೋಡಿ, ಚಂದ್ರಶೇಖರ ಗೋಕಾಕ, ಅಶೋಕ ವಾಲ್ಮೀಕಿ, ಬಿಜೆಪಿ ಯುವ ಮುಖಂಡ, ವಿಎಕೆ ಫೌಂಡೇಷನ್ ಸಂಸ್ಥಾಪಕ ವೆಂಕಟೇಶ ಕಾಟವೆ, ಬಿಜೆಪಿ ಮುಖಂಡ ರಾಜು ಕಾಳೆ, ಯಲ್ಲಪ್ಪ ಕಾಳೆ, ಕಲ್ಲಪ್ಪ ಖಂಡೇಕರ, ಸಚಿನ್ ಕಾಟವೆ, ಸಚಿನ್ ಪೂಜಾರಿ, ಆನಂದ ಬಾಕಳೆ, ಸಂತೋಷ ಕಾಟವೆ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net