ಬೆಂಗಳೂರಿನಿಂದ 400 ಕಿ.ಮೀ ಕಾಲ್ನಡಿಗೆಯಲ್ಲೇ ಬಂದರು...

3-Saunshi-1,,,
Published on

ಸಂಶಿ: ಕರೊನಾ ಕರ್ಫ್ಯ ಹಿನ್ನೆಲೆಯಲ್ಲಿ ವಾಹನಗಳಿಲ್ಲದೆ ಬೆಂಗಳೂರಿನಿಂದ ಸುಮಾರು 400 ಕಿ.ಮೀ. ನಡೆದುಕೊಂಡು ಸಂಶಿ ಗ್ರಾಮಕ್ಕೆ ಶುಕ್ರವಾರ ಆಗಮಿಸಿದ ಕಾರ್ವಿುಕ ದಂಪತಿ ಹಾಗೂ ಪುಟ್ಟ ಬಾಲಕಿಗೆ ಅಧಿಕಾರಿಗಳು, ಗ್ರಾಪಂನವರು ಆಹಾರ ಪದಾರ್ಥ ನೀಡಿ ಮಾನವೀಯತೆ ಮೆರೆದಿದ್ದಾರೆ. ಬೆಂಗಳೂರಿನ ಡಿ.ಜೆ. ಹಳ್ಳಿಯಲ್ಲಿ ಗಾರೆ ಕೆಲಸಕ್ಕೆ ಹೋಗಿದ್ದ ಈ ದಂಪತಿ ಹಾಗೂ ಪುಟ್ಟ ಬಾಲಕಿಯನ್ನು ಅಧಿಕಾರಿಗಳು ವಿಚಾರಣೆ ನಡೆಸಿದಾಗ ಹುಬ್ಬಳ್ಳಿಗೆ ಹೋಗುತ್ತಿದ್ದೇವೆ ಎಂದು ತಿಳಿಸಿದರು. ಅವರನ್ನು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ನಡೆಸಿ, ತಹಸೀಲ್ದಾರ್ ಸೂಚನೆಯಂತೆ ಹುಬ್ಬಳ್ಳಿಯ ಸರ್ಕಾರಿ ಹೋಂ ಕ್ವಾರಂಟೈನ್​ಗೆ ಕಳುಹಿಸಲಾಯಿತು. ಅವರಿಗೆ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶಗೌಡ ಪಾಟೀಲ, ಗ್ರಾಪಂ ಪಿಡಿಒ ವೈ.ಎಚ್. ಹೊಟ್ಟಿಗೌಡರ, ಗ್ರಾಮಲೆಕ್ಕಾಧಿಕಾರಿ ಶಿವಾನಂದ ಕರಿಗೇರ ನೀರು, ಹಣ್ಣು, ಆಹಾರ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net