ಬೆಂಗಳೂರಿನ ಇಬ್ಬರು ಪ್ರವಾಸಿಗರ ರಕ್ಷಣೆ

HBL 10gkn1-a-
Published on

ಗೋಕರ್ಣ: ಇಲ್ಲಿನ ಕುಡ್ಲೆ ಬೀಚ್ ಸಮುದ್ರದಲ್ಲಿ ಶನಿವಾರ ಮಧ್ಯಾಹ್ನ ಈಜಲು ತೆರಳಿ ಅಲೆಗೆ ಸಿಲುಕಿ ತೊಂದರೆಯಲ್ಲಿದ್ದ ಬೆಂಗಳೂರಿನ ಕುಶಾಲ ಗೌಡ ಮತ್ತು ಪ್ರತಾಪ ಗೌಡ ಎಂಬ ಯುವಕರಿಬ್ಬರನ್ನು ಲೈಫ್ ಗಾರ್ಡ್​ಗಳಾದ ಸಂಜೀವ ಹೊಸ್ಕಟ್ಟ ಮತ್ತು ಕುಮಾರ ಅಂಬಿಗ ರಕ್ಷಿಸಿ ದಡಕ್ಕೆ ತಂದರು. ಇವರು ತಮ್ಮ ಇತರ 7 ಸ್ನೇಹಿತರ ಜೊತೆಗೆ ನೀರಿಗಿಳಿದಾಗ ಈ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net