ಬೆಂಕಿಯಿಂದ ಗಾಯಗೊಂಡಿದ್ದ ಗೃಹಿಣಿ ಸಾವು

MDG rekaha
Published on

ಮೂಡಿಗೆರೆ: ಬಾಳೂರು ಸಮೀಪದ ಮಾಳಿಗನಾಡು ಗ್ರಾಮದಲ್ಲಿ 15 ದಿಂದ ಹಿಂದೆ ಮನೆಗೆ ಬೆಂಕಿ ತಗುಲಿದ ಸಂದರ್ಭದಲ್ಲಿ ತೀವ್ರವಾಗಿ ಸುಟ್ಟ ಗಾಯಗೊಂಡಿದ್ದ ಗೃಹಿಣಿ ರೇಖಾ (36) ಶನಿವಾರ ರಾತ್ರಿ ಮೃತಪಟ್ಟರು.

ಮಾಳಿಗನಾಡು ಗ್ರಾಮದ ಕೃಷಿಕ ಸುನೀಲ್ ಎಂಬುವವರ ಮನೆಯಲ್ಲಿ ಅಡುಗೆ ಮಾಡಲು ಸ್ಟೌ ಹಚ್ಚುವಾಗ ಬೆಂಕಿ ಆವರಿಸಿಕೊಂಡಿತ್ತು. ಇದರಿಂದ ಮನೆ ಸಂಪೂರ್ಣ ಸುಟ್ಟುಹೋಗಿತ್ತು. ರೇಖಾ ಅವರಿಗೆ ಬೆಂಕಿ ತಗುಲಿ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ರೇಖಾ ಅವರಿಗೆ ಬೆಂಕಿ ತಗುಲಿದರೂ ಮನೆಯ ವಸ್ತುಗಳನ್ನು ರಕ್ಷಿಸಲು ಯತ್ನಿಸಿದ್ದರು. ಸುನೀಲ್ ಅವರಿಗೂ ಸಣ್ಣಪುಟ್ಟ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net