ಬೆಂಕಿಗೆ ಮಕ್ಕಳಿಬ್ಬರನ್ನು ನೂಕಿ ಆತ್ಮಹತ್ಯೆ ಮಾಡಿಕೊಂಡು ತಾಯಿ

03591374-bb72-4935-b48f-0dde6a352d3c.jpg--00001
Published on

ಚಿತ್ರದುರ್ಗ:ಬೇಲಿಗೆ ಬೆಂಕಿ ಹಚ್ಚಿ ತನ್ನಿಬ್ಬರು ಮಕ್ಕಳನ್ನು ಅದಕ್ಕೆ ನೂಕಿ ತಾನು ಕೂಡ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಚಳ್ಳಕೆರೆ ತಾಲೂಕು ಮಲ್ಲಸಮುದ್ರ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಮೃತರನ್ನು ಮಾರಕ್ಕ(24),ಮಕ್ಕಳಾದ ನಯನ್(4) ಹಾಗೂ ಹರ್ಷವರ್ಧನ(2) ಎಂದು ಗುರುತಿಸಲಾಗಿದೆ.
ಮಧ್ಯಾಹ್ನ 12ರ ಹೊತ್ತಿಗೆ ಹೋಗಿದ್ದ ಸಂದರ್ಭದಲ್ಲಿ ತಾಯಿ ಬೇಲಿಗೆ ಬೆಂಕಿ ಮಕ್ಕಳನ್ನು ತಳ್ಳಿ ತಾನೂ ಬಿದ್ದಿದ್ದಾಳೆ. ಮಕ್ಕಳಿಬ್ಬರು ಸ್ಥಳದಲ್ಲೇ ಅಸು ನೀಗಿದ್ದರೆ, ತೀವ್ರವಾಗಿ ಗಾಯಗೊಂಡಿದ್ದ ತಾಯಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಅಸು ನೀಗಿದ್ದಾಳೆ. ಆತ್ಮಹತ್ಯೆಗೆ ಕಾರಣ ಏನೆಂದು ತಿಳಿ ದು ಬಂದಿಲ್ಲ. ಕೌಟುಂಬಿಕ ಕಲಹ ಈ ದುರಂತ ಕಾರಣವಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ತಳಕು ಠಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net