ಬೆಂಕಿಗೆ ಪುರಸಭೆ ಹಳೆಯ ವಾಹನ ಆಹುತಿ

19
Published on

ಚಿಕ್ಕನಾಯಕನಹಳ್ಳಿ:- ಪಟ್ಟಣದ ಪುರಸಭಾ ಕಚೇರಿಯ ಹಿಂಭಾಗದಲ್ಲಿರುವ ಪಂಪ್​ ಹೌಸ್​ ಬಳಿ ಮಂಗಳವಾರ ಮಧ್ಯಾಹ್ನ ಕಾಣಿಸಿಕೋಂಡ ಬೆಂಕಿಗೆ ಪುರಸಭೆಗೆ ಸೇರಿದ ಹಳೆಯ ವಾಹನಗಳು ಸುಟ್ಟು ಭಸ್ಮವಾಗಿವೆ. ಕಚೇರಿಯ ಹಿಂಭಾಗ ನಿಲ್ಲಿಸಿದ್ದ ಹಳೆಯ ಜಖಂಗೊಂಡಿರುವ ಟ್ರ್ಯಾಕ್ಟರ್​ ಇಂಜಿನ್​, ಸೆಪ್ಟಿಕ್​ ಟ್ಯಾಂಕ್​, ಟ್ರೈಲರ್​, ನೀರಿನ ಟ್ಯಾಂಕರ್​ ಸೇರಿ ಅಲ್ಲಿದ್ದಂತಹ ಪುರಸಭೆಗೆ ಸೇರಿದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಪುರಸಭೆ ಪೌರಕಾರ್ಮಿಕರು, ಪುರಸಭೆ ಕೆಲವು ಸದಸ್ಯರು ಸೇರಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಇತ್ತೀಚೆಗಷ್ಟೇ ಪುರಸಭೆಯಲ್ಲಿ ಹಳೆಯ ವಸ್ತುಗಳನ್ನು ಗುತ್ತಿಗೆದಾರರು ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪದ ಬೆನ್ನಲ್ಲೇ ಈ ಬೆಂಕಿಯ ಅವಘಡ ನಡೆದಿರುವುದು ಅನುಮಾನ ಕಡೆ ಮಾಡಿಕೊಟ್ಟಿದೆ. ಈ ಹಿಂದೆಯೂ ಇದೇ ಜಾಗದಲ್ಲಿ ಕಸ ಸಾಗಿಸುವ ವಾಹನ ಸುಟ್ಟು ಹೋಗಿದ್ದು ವರದಿಯಾಗಿತ್ತು. ಪದೇಪದೆ ಈ ಜಾಗದಲ್ಲಿ ಬೆಂಕಿ ಬೀಳುತ್ತಿರುವುದು ಪುರಸಭೆ ಅಧಿಕಾರಿಗಳ ಗಮನದಲ್ಲಿದ್ದರು. ಇದರ ಸ್ವಚ್ಛತೆಗಾಗಲಿ ರಕ್ಷಣೆಗಾಗಿ ತಲೆಕೆಡಿಸಿಕೊಂಡಿರುವುದಿಲ್ಲ ಎಂದು ನಾಗರಿಕರು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net