ಬೆಂಕಿಗೆ ತೋಟಗಾರಿಕೆ ಬೆಳೆಗಳು ನಾಶ

14arsph1ep
ಅಗ್ನಿ ಅವಘಡದಿಂದ ತೋಟಗಾರಿಕಾ ಬೆಳೆಗಳು ಸುಟ್ಟು ಹೋಗಿರುವುದು.
Published on

ಅರಸೀಕೆರೆ: ತಾಲೂಕಿನ ಗಂಡಸಿ ಹೋಬಳಿ ಬೋರೆಹಳ್ಳಿ ಗ್ರಾಮದ ಕೃಷಿ ಮಹಿಳೆ ಬಸಮ್ಮ್ಮ ಅವರ ತೋಟದಲ್ಲಿ ಸೋಮವಾರ ಸಂಜೆ ಸಂಭವಿಸಿದ ಅಗ್ನಿ ಅವಘಡದಿಂದ ಹಲವು ತೋಟಗಾರಿಕಾ ಬೆಳೆಗಳು ಸಂಪೂರ್ಣ ಸುಟ್ಟು ಹೋಗಿವೆ.

ಕ್ಷಣ ಮಾತ್ರದಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದ ಬೆಂಕಿ ಶ್ರೀಗಂಧ, ಹೆಬ್ಬೇವು, ಮೆಣಸು, ಸೀಬೆ, ತೆಂಗು ಸೇರಿ ಹಲವಾರು ಬೆಳೆಗಳನ್ನು ಆಪೋಷನ ತೆಗೆದುಕೊಂಡಿದ್ದು, ಅಪಾರ ನಷ್ಟ ಸಂಭವಿಸಿದೆ. ಹನಿ ನೀರಾವರಿಗೆ ಅಳವಡಿಸಲಾಗಿದ್ದ ಪ್ಲಾಸ್ಟಿಕ್ ಪೈಪ್‌ಗಳು ಬೆಂದು ಹೋಗಿವೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಸ್ಥಳೀಯರು ಬೆಂಕಿ ನಂದಿಸುವ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net