ಬೆಂಕಿಗೆ ಆಹುತಿಯಾದ ನೂರಾರು ಜಾತಿಯ ಗಿಡಗಳು

1blrp1.
ಬೇಲೂರು ಪಟ್ಟಣ ಸಮೀಪದ ಯಗಚಿ ಜಲಾಶಯದ ಮುಂಭಾಗ ಮತ್ತು ಅಕ್ಕಪಕ್ಕದಲ್ಲಿ ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿ. ಅಗ್ನಿಶಾಮಕ ಠಾಣಾಧಿಕಾರಿ ಜವರಯ್ಯ ಇತರರು ಇದ್ದರು.
Published on

ಬೇಲೂರು: ಪಟ್ಟಣ ಸಮೀಪದ ಯಗಚಿ ಜಲಾಶಯ ಬಳಿ ನೂರಾರು ಎಕರೆ ಜಾಗದಲ್ಲಿ ಬೆಳೆಸಲಾಗಿದ್ದ ವಿವಿಧ ಜಾತಿಯ ಗಿಡಗಳಿಗೆ ಕಿಡಿಗೇಡಿಗಳು ಬೆಂಕಿ ಹಾಕಿದ್ದರಿಂದ ಸುಟ್ಟು ಭಸ್ಮವಾಗಿವೆ.

ಯಗಚಿ ಜಲಾಶಯ ಮುಂಭಾಗ ಮತ್ತು ಸಮೀಪದಲ್ಲಿ ನೂರಾರು ಎಕರೆ ಜಾಗದಲ್ಲಿ ಬೆಂಕಿ ಬಿದ್ದಿರುವ ವಿಷಯ ತಿಳಿದು ಅಗ್ನಿಶಾಮಕ ದಳ ಬರುವಷ್ಟರಲ್ಲಿ ಸಾಕಷ್ಟು ಗಿಡಗಳು ಸುಟ್ಟುಹೋಗಿದ್ದವು. ಬಳಿಕ ಬೇರೆಡೆ ಬೆಂಕಿ ಹರಡದಂತೆ ಅಗ್ನಿ ಶಾಮಕ ಸಿಬ್ಬಂದಿ ಶ್ರಮಿಸಿದರು.

ಸಾಲು ಮರದ ತಿಮ್ಮಕ್ಕ ದತ್ತು ಪುತ್ರ ಉಮೇಶ್ ಮಾತನಾಡಿ, ಕಿಡಿಗೇಡಿಗಳು ಉದ್ದೇಶಪೂರಕವಾಗಿ ಈ ಕೃತ್ಯವನ್ನು ಎಸಗಿದ್ದಾರೆ. ಸಾವಿರಾರು ಗಿಡಗಳನ್ನು ಪೋಷಣೆ ಮಾಡುವುದು ಕಷ್ಟಕವಾದರೂ ಪರಿಸರಕ್ಕೆ ಬೆಂಕಿ ಇಟ್ಟಿರುವುದು ಬೇಸರದ ಸಂಗತಿ. ಈ ಹಿಂದೆಯೂ ಈ ರೀತಿ ಬೆಂಕಿ ಹಾಕಿದ್ದರು. ಇನ್ನಷ್ಟು ಗಿಡಗಳನ್ನು ನೆಟ್ಟು ಪೋಷಿಸಲಿದ್ದೇವೆ. ಘಟನೆಗೆ ಸಂಬಂಧಿಸಿದಂತೆ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಬಂಧಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net